ಕಿಕ್ಕೇರಿ: ಕೆ.ಎಸ್‌.ನ ಸರೋವರ ಅಭಿವೃದ್ಧಿ

7

ಕಿಕ್ಕೇರಿ: ಕೆ.ಎಸ್‌.ನ ಸರೋವರ ಅಭಿವೃದ್ಧಿ

Published:
Updated:

ಮಂಡ್ಯ: ‘ಪ್ರೇಮಕವಿ ಕೆ.ಎಸ್‌.ನರಸಿಂಹಸ್ವಾಮಿ ಅವರ ಕಾವ್ಯ ರಚನೆಗೆ ಪ್ರೇರಣೆಯಾಗಿದ್ದ ಸಿರಿಗೆರೆ (ಕಿಕ್ಕೇರಿ ಕೆರೆ) ಕೆರೆಯನ್ನು ಕೆ.ಎಸ್‌.ನ ಸರೋವರವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು’ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ ಅಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ಟ್ರಸ್ಟ್‌ ವತಿಯಿಂದ ನಗರದ ವಿವೇಕಾನಂದ ರಂಗಮಂದಿರದಲ್ಲಿ ಗುರುವಾರ ನಡೆದ ಕೆ.ಎಸ್‌.ನ ಕಾವ್ಯೋತ್ಸವದಲ್ಲಿ ಮಾತನಾಡಿದರು. ‘350 ಎಕರೆ ವಿಸ್ತೀರ್ಣ ಹೊಂದಿರುವ ಸುಂದರ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು. ಜೊತೆಗೆ ನರಸಿಂಹಸ್ವಾಮಿ ಅವರು ಜೀವಿಸಿದ ಮನೆಗೆ ಸಂಗ್ರಹಾಲಯದ ರೂಪ ನೀಡಲಾಗುವುದು. ಗ್ರಂಥಾಲಯ, ರಂಗಮಂದಿರ ನಿರ್ಮಾಣ ಮಾಡುವ ಮೂಲಕ ವೈವಿಧ್ಯಮಯ ಕನ್ನಡ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು’ ಎಂದು ಹೇಳಿದರು.

ಕೆ.ಎಸ್‌.ನ ಅವರು ಜೀವಿಸಿದ ಕಿಕ್ಕೇರಿ ಪಟ್ಟಣವನ್ನು ಜಿಲ್ಲೆಯ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದರು.

ಹಿರಿಯ ಗಾಯಕಿ ಬಿ.ಕೆ.ಸುಮಿತ್ರಾ, ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry