ವೇಣುಗೋಪಾಲಸ್ವಾಮಿ 85ನೇ ಬ್ರಹ್ಮ ರಥೋತ್ಸವ

7

ವೇಣುಗೋಪಾಲಸ್ವಾಮಿ 85ನೇ ಬ್ರಹ್ಮ ರಥೋತ್ಸವ

Published:
Updated:
ವೇಣುಗೋಪಾಲಸ್ವಾಮಿ 85ನೇ ಬ್ರಹ್ಮ ರಥೋತ್ಸವ

ಬೆಂಗಳೂರು: ಹೆಸರಘಟ್ಟ ಹೋಬಳಿಯ ಕಾಕೋಳು ಗ್ರಾಮದ ವೇಣುಗೋಪಾಲಸ್ವಾಮಿಯ 85ನೇ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಉತ್ಸವಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ದೇವಸ್ಥಾನಕ್ಕೆ ತರಲಾಯಿತು. ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ರಥೋತ್ಸವದ ಕಳಶಕ್ಕೆ ದವನ ಮತ್ತು ಬಾಳೆಹಣ್ಣು ಎಸೆದರು.

ಕಾಕೋಳು ಹಾಗೂ ಸುತ್ತಲಿನ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಪಾನಕ, ಕೋಸಂಬರಿ ನೀಡಲಾಯಿತು.

‘ಕಳಶಕ್ಕೆ ಬಾಳೆಹಣ್ಣು ಎಸೆದರೆ ತಮ್ಮ ಇಷ್ಟಾರ್ಥ ಈಡೇರುತ್ತದೆ ಎಂಬುದು ಜನರ ನಂಬಿಕೆ. ಇದರಿಂದ ಸಾಕಷ್ಟು ಜನರಿಗೆ ಒಳ್ಳೆಯದಾಗಿದೆ’ ಎಂದು ದೇವಸ್ಥಾನ ಟ್ರಸ್ಟ್‌ನ ಉಪಾಧ್ಯಕ್ಷ ರಾಘವೇಂದ್ರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry