ಥಾಮಸ್‌ ಕಪ್: ಭಾರತ ತಂಡ ಪ್ರಕಟ

7

ಥಾಮಸ್‌ ಕಪ್: ಭಾರತ ತಂಡ ಪ್ರಕಟ

Published:
Updated:
ಥಾಮಸ್‌ ಕಪ್: ಭಾರತ ತಂಡ ಪ್ರಕಟ

ನವದೆಹಲಿ: ಮುಂಬರುವ ಬಿಡ್ಲ್ಯುಎಫ್‌ ಥಾಮಸ್‌ ಮತ್ತು ಊಬರ್ ಕಪ್‌ ಫೈನಲ್ಸ್‌ ಟೂರ್ನಿಗೆ ಗುರುವಾರ ಡ್ರಾ ಪ್ರಕಟಿಸಲಾಗಿದೆ.

ಬ್ಯಾಂಕಾಕ್‌ನಲ್ಲಿ ಮೇ 20ರಿಂದ 27ರವರೆಗೆ ನಡೆಯುವ ಟೂರ್ನಿಯಲ್ಲಿ ಭಾರತ ಸುಲಭ ಡ್ರಾ ಪಡೆದಿದೆ. ಎರಡೂ ಟೂರ್ನಿಗಳಿಗೆ ಭಾರತ ಪುರುಷರ ಮತ್ತು ಮಹಿಳೆಯರ ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಭಾರತ ಮಹಿಳೆಯರ ತಂಡ ಹಿಂದಿನ ಎರಡು ಆವೃತ್ತಿಗಳಲ್ಲಿ ಸೆಮಿಫೈನಲ್ ತಲುಪಿತ್ತು. ಈ ಬಾರಿ ಜಪಾನ್‌, ಕೆನಡಾ, ಆಸ್ಟ್ರೇಲಿಯಾ ತಂಡಗಳೊಂದಿಗೆ ‘ಎ’ ಗುಂಪಿನಲ್ಲಿದೆ.

ಥಾಮಸ್‌ ಕಪ್‌ನಲ್ಲಿ ಪುರುಷರ ತಂಡ ಚೀನಾ, ಫ್ರಾನ್ಸ್‌, ಆಸ್ಟ್ರೇಲಿಯಾ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಭಾರತ ಪುರುಷರ ತಂಡವನ್ನು ಕಿದಂಬಿ ಶ್ರೀಕಾಂತ್ ಹಾಗೂ ಮಹಿಳೆಯರ ತಂಡವನ್ನು ಪಿ.ವಿ ಸಿಂಧು ಮುನ್ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry