ಬ್ರಾಹ್ಮಣ ಮಹಾಸಭಾ ಅಧ್ಯಕ್ಷರ ವಿರುದ್ಧ ಮೊಕದ್ದಮೆ

7

ಬ್ರಾಹ್ಮಣ ಮಹಾಸಭಾ ಅಧ್ಯಕ್ಷರ ವಿರುದ್ಧ ಮೊಕದ್ದಮೆ

Published:
Updated:

ಬೆಂಗಳೂರು: ಹಣ ದುರುಪಯೋಗ ಹಾಗೂ ಅವ್ಯವಹಾರ ಆರೋಪದಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್‌.ವೆಂಕಟನಾರಾಯಣ ಹಾಗೂ ಇತರ ಮೂವರ ವಿರುದ್ಧ 3ನೇ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಮಹಾಸಭಾದ ಮಾಜಿ ಸಂಘಟನಾ ಕಾರ್ಯದರ್ಶಿ ಡಿ.ಎನ್.ಸುರೇಶ್‌, ‘ಮಹಾಸಭಾದ ಸೋದರ ಸಂಸ್ಥೆಯಾದ ಸಪ್ತರ್ಷಿ ಫೌಂಡೇಷನ್ ಟ್ರಸ್ಟ್‌ನ ಕಟ್ಟಡ ದುರಸ್ತಿ ಹಾಗೂ ಉದ್ದೇಶಿತ ಸಭಾಭವನ ಜಾಗದಲ್ಲಿ ಕಲ್ಲು ಒಡೆಯುವ ಕೆಲಸವನ್ನು ಟೆಂಡರ್‌ ಕರೆಯದೆ ನೀಡಲಾಗಿದೆ. ಇದರಲ್ಲಿ ಕೋಟಿಯಷ್ಟು ಅವ್ಯವಹಾರವಾಗಿದೆ. ಇದು ಉಪಸಮಿತಿ ಹಾಗೂ ತಜ್ಞರ ವರದಿಯಿಂದ ಬಯಲಾಗಿದೆ’ ಎಂದಿದ್ದಾರೆ.

‘ವೆಂಕಟನಾರಾಯಣ ಹಾಗೂ ಮಾಜಿಪ್ರಧಾನ ಕಾರ್ಯದರ್ಶಿ ಬಿ.ಎಸ್‌.ರವಿಶಂಕರ್, ಖಜಾಂಚಿ ಬಿ.ವಿ.ಕುಮಾರ್, ಗುತ್ತಿಗೆದಾರ ಎಚ್‌.ವಿ.ಸತೀಶ್‌ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದೇನೆ. ಅವ್ಯವಹಾರದ ವಿರುದ್ಧ ಹೋರಾಟ ಮಾಡುತ್ತಿದ್ದ ಪದಾಧಿಕಾರಿಗಳನ್ನು ಬೈಲಾ ನಿಯಮಗಳಿಗೆ ವಿರುದ್ಧವಾಗಿ ಸ್ಥಾನದಿಂದ ತೆಗೆದು ಹಾಕಲಾಗಿದೆ. ಇದನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry