ಪ್ರಸಾದ ಸೇವಿಸಿ 400 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

7

ಪ್ರಸಾದ ಸೇವಿಸಿ 400 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Published:
Updated:

ಪಶ್ಚಿಮ ಬಂಗಾಳ/ಹೌರಾ: ಇಲ್ಲಿನ ಹೌರಾ ಜಿಲ್ಲೆಯ ಕಕ್ರೈ ಎನ್ನುವ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಸಾದ ಸೇವಿಸಿದ 400ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ಅಸ್ವಸ್ಥರಾಗಿದ್ದ 125 ಮಂದಿಯನ್ನು ಜಂಗಲ್ಪಾರಾ ಮತ್ತು ದೆಬಿಪುರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 300 ಮಂದಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸಾದ ಸೇವಿಸಿದ ಭಕ್ತರು ಹೊಟ್ಟೆ ನೋವು ಮತ್ತು ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯಧಿಕಾರಿ ಬಭಾನಿ ದಾಸ್‌ ತಿಳಿಸಿದ್ದಾರೆ.

ಪ್ರಸಾದ ತಯಾರಿಸಲು ಬಳಸಲಾದ ನೀರನ್ನು ಪರೀಕ್ಷಿಸಲು ಕೋಲ್ಕತ್ತದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry