ಬೀಳುವ ಸ್ಥಿತಿಯಲ್ಲಿದೆ ವಿದ್ಯುತ್‌ ಕಂಬ

7

ಬೀಳುವ ಸ್ಥಿತಿಯಲ್ಲಿದೆ ವಿದ್ಯುತ್‌ ಕಂಬ

Published:
Updated:
ಬೀಳುವ ಸ್ಥಿತಿಯಲ್ಲಿದೆ ವಿದ್ಯುತ್‌ ಕಂಬ

ಹೊಸಕೋಟೆ: ಪಟ್ಟಣದ ಪಂಚಮುಖಿ ಗಣೇಶ ದೇವಾಲಯದ ಬಳಿ ಹಾದು ಹೋಗಿರುವ ವಿದ್ಯುತ್‌ ತಂತಿಗಳಿಗೆ ಸಿಮೆಂಟ್‌ ಬದಲಾಗಿ ಮರದ ಕಂಬಗಳನ್ನು ಬಳಸಲಾಗಿದ್ದು, ಬೀಳುವ ಸ್ಥಿತಿಯಲ್ಲಿವೆ.

ಮರದ ಕಂಬಗಳಿಗೆ ಗೆದ್ದಲು ಬಿದ್ದಿದ್ದು, ಯಾವ ಕ್ಷಣದಲ್ಲಾದರೂ ಬೀಳಬಹುದು. ಸಾರ್ವಜನಿಕರು ಹಾಗೂ ಜಾನುವಾರುಗಳ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಸಿಮೆಂಟ್‌ ಕಂಬಗಳನ್ನು ಹಾಕುವಂತೆ ಬೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಾಸುದೇವಯ್ಯ ಬೇಸರ ವ್ಯಕ್ತಪಡಿಸಿದರು.

ಪಟ್ಟಣ ಹೊರವಲಯದ ದಂಡುಪಾಳ್ಯ ಗ್ರಾಮದ ಬಳಿ ಕೃಷಿ ಭೂಮಿಯಲ್ಲಿ ವಿದ್ಯುತ್‌ ತಂತಿಗಳು ಐದು ಅಡಿ ಎತ್ತರದಲ್ಲಿ ನೇತಾಡುತ್ತಿವೆ.

‘ಈ ಭಾಗದಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದೆವು. ಕಂಬಗಳು ವಾಲಿರುವುದರಿಂದ ಪ್ರಾಣಭೀತಿಯಿಂದಾಗಿ ಇತ್ತ ಬರುವುದನ್ನೇ ಬಿಟ್ಟಿದ್ದೇವೆ. ಇವುಗಳನ್ನು ಕೂಡಲೇ ಸರಿಪಡಿಸಬೇಕು’ ಎಂದು ದನಗಾಯಿ ಮಾರಪ್ಪ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry