ಐಟಿ ದಾಳಿಗೆ ಹೆದರುವುದಿಲ್ಲ ಸಚಿವ ವಿನಯ ಕುಲಕರ್ಣಿ

7

ಐಟಿ ದಾಳಿಗೆ ಹೆದರುವುದಿಲ್ಲ ಸಚಿವ ವಿನಯ ಕುಲಕರ್ಣಿ

Published:
Updated:

ಧಾರವಾಡ: ‘ಚುನಾವಣೆ ಸಮೀಪಿಸುತ್ತಿದ್ದಂತೆಯೇ ನನ್ನ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರಿಗೆ ಸೇರಿದ ಆಸ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಲಿದ್ದಾರೆ ಎಂದು ಹಲವು ಹಿತೈಷಿಗಳು ಹೇಳಿದ್ದಾರೆ. ಆದರೆ ನನ್ನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಶುದ್ಧ ದಾಖಲೆಗಳಿದ್ದು, ಹೆದರುವ ಪ್ರಶ್ನೆಯೇ ಇಲ್ಲ’ ಎಂದು ಗಣಿ ಸಚಿವ ವಿನಯ ಕುಲಕರ್ಣಿ ಗುರುವಾರ ಹೇಳಿದರು.

‘ನಮ್ಮ ಡೇರಿಯಲ್ಲಿ ಎರಡೂವರೆ ಸಾವಿರ ಆಕಳು ಇವೆ. ತಿಂಗಳಿಗೆ ₹1 ಕೋಟಿ ಮೌಲ್ಯದ ಹಾಲು ಮಾರಾಟ ಮಾಡುತ್ತೇನೆ. 500ಕ್ಕೂ ಹೆಚ್ಚು ಎಕರೆ ಹೊಲ ಇದೆ. ಯೋಜನಾಬದ್ಧ ಕೃಷಿ ಮಾಡುತ್ತಿದ್ದೇನೆ. ನೀರಿನ ಮಿತ ಬಳಕೆ ಹಾಗೂ ಲಾಭದಾಯಕ ಕೃಷಿಯನ್ನು ಅಳವಡಿಸಿಕೊಂಡಿದ್ದೇನೆ. ಎಲ್ಲದಕ್ಕೂ ದಾಖಲೆಗಳಿವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry