ವ್ಯಾಪಂ ಹಗರಣ: ಮೆಡಿಕಲ್‌ ಕಾಲೇಜು ಅಧ್ಯಕ್ಷನ ಬಂಧನ

7

ವ್ಯಾಪಂ ಹಗರಣ: ಮೆಡಿಕಲ್‌ ಕಾಲೇಜು ಅಧ್ಯಕ್ಷನ ಬಂಧನ

Published:
Updated:

ನವದೆಹಲಿ: ಬಹುಕೋಟಿ ವ್ಯಾಪಂ ಹಗರಣ ಸಂಬಂಧ ಭೂಪಾಲ್ ಮೂಲದ ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಜೆ.ಎನ್. ಚೌಕೇಶ್‌ ಅವರನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಭೂಪಾಲ್‌ನ ವಿಶೇಷ ನ್ಯಾಯಲಯದಲ್ಲಿ ಬುಧವಾರ ಪೂರಕ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು, ನ್ಯಾಯಾಲಯ ಆರೋಪಿ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್‌ ಹೊರಡಿಸಿದೆ.

‘ಅರೆಸ್ಟ್‌ ವಾರೆಂಟ್ ಆಧಾರದ ಮೇಲೆ ಭೂಪಾಲ್‌ನ ನಿವಾಸದಲ್ಲಿದ್ದ ಆರೋಪಿಯನ್ನು ಸಿಬಿಐ ಪೊಲೀಸರು ಬಂಧಿಸಿ, ನ್ಯಾಯಾಲಯದ ಎದುರು ಹಾಜರು ಪಡಿಸಿದ್ದು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry