ಕ್ಷಿಪಣಿ ಮೇಲೆ ನಿಗಾವಹಿಸುವ ಉಪಕರಣ ಖರೀದಿಸಿದ ಪಾಕಿಸ್ತಾನ

7

ಕ್ಷಿಪಣಿ ಮೇಲೆ ನಿಗಾವಹಿಸುವ ಉಪಕರಣ ಖರೀದಿಸಿದ ಪಾಕಿಸ್ತಾನ

Published:
Updated:

ಬೀಜಿಂಗ್‌: ಕ್ಷಿಪಣಿಗಳ ಮೇಲೆ ನಿಗಾ ವಹಿಸುವ ಶಕ್ತಿಶಾಲಿ ಉಪಕರಣವನ್ನು ಪಾಕಿಸ್ತಾನಕ್ಕೆ ಚೀನಾ ಮಾರಾಟ ಮಾಡಿದೆ.

ಅತ್ಯಾಧುನಿಕ ಮತ್ತು ಅತಿ ಸೂಕ್ಷ್ಮವಾದ ಇಂತಹ ಉಪಕರಣವನ್ನು ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿರುವ ದೇಶಗಳಲ್ಲಿ ಚೀನಾ ಮೊದಲನೇಯದಾಗಿದೆ ಎಂದು ಚೀನಾದ ಅಕಾಡೆಮಿ ಆಫ್‌ ಸೈನ್ಸಸ್‌ ತಿಳಿಸಿದೆ.

ಪಾಕಿಸ್ತಾನ ಸೇನೆಯು ಇತ್ತೀಚೆಗೆ ಚೀನಾ ನಿರ್ಮಿತ ಈ ಉಪಕರಣವನ್ನು ದಾಳಿ ನಡೆಸುವ ಪ್ರದೇಶದಲ್ಲಿ ನಿಯೋಜಿಸಿತ್ತು. ಇದನ್ನು ಪರೀಕ್ಷೆಗಾಗಿಯೂ ಬಳಸಿಕೊಳ್ಳಲಾಗಿತ್ತು.

ಅಣ್ವಸ್ತ್ರ ಕೊಂಡೊಯ್ಯಬಲ್ಲ ಅತ್ಯಂತ ಶಕ್ತಿಶಾಲಿ ಖಂಡಾಂತರ ಕ್ಷಿಪಣಿ ’ಅಗ್ನಿ–5’ ಪರೀಕ್ಷೆಯನ್ನು ಭಾರತ ನಡೆಸಿದ ಬಳಿಕ ಚೀನಾ ಈ ಉಪಕರಣವನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry