ಮಾಲ್ಡೀವ್ಸ್‌: ತುರ್ತು ಪರಿಸ್ಥಿತಿ ರದ್ದು

7

ಮಾಲ್ಡೀವ್ಸ್‌: ತುರ್ತು ಪರಿಸ್ಥಿತಿ ರದ್ದು

Published:
Updated:
ಮಾಲ್ಡೀವ್ಸ್‌: ತುರ್ತು ಪರಿಸ್ಥಿತಿ ರದ್ದು

ಕೊಲಂಬೊ: ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಗಿದ್ದ ದ್ವೀಪರಾಷ್ಟ್ರ ಮಾಲ್ಡೀವ್ಸ್‌ನಲ್ಲಿ 45 ದಿನಗಳಿಂದ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯನ್ನು ಗುರುವಾರ ರದ್ದುಪಡಿಸಲಾಗಿದೆ.

ತುರ್ತುಪರಿಸ್ಥಿತಿ ರದ್ದಾಗಿದ್ದು, ದೇಶದ ಭದ್ರತಾ ಸೇವೆಗಳು ಸಹಜ ಸ್ಥಿತಿಗೆ ಮರಳಲಿವೆ ಎಂದು ಮಾಲ್ಡೀವ್ಸ್‌ ಅಧ್ಯಕ್ಷ ಯಾಮಿನ್‌ ಅಬ್ದುಲ್ಲಾ ಗಯೂಮ್ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.

ಜೈಲಿನಲ್ಲಿರುವ ರಾಜಕೀಯ ವಿರೋಧಿಗಳ ಬಿಡುಗಡೆ ಹಾಗೂ ಕೆಲವರನ್ನು ಬಂಧಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶ ತಿರಸ್ಕರಿಸಿದ ಯಾಮಿನ್ ತುರ್ತುಪರಿಸ್ಥಿತಿ ಹೇರಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry