ಮಾನವ ಕುಲಕ್ಕೆ ದೇವರ ದಾಸಿಮಯ್ಯ ದಾರಿದೀಪ

7
ಜಯಂತ್ಯುತ್ಸವ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಭಿಪ್ರಾಯ

ಮಾನವ ಕುಲಕ್ಕೆ ದೇವರ ದಾಸಿಮಯ್ಯ ದಾರಿದೀಪ

Published:
Updated:

ಕಲಬುರ್ಗಿ: 12ನೇ ಶತಮಾನಕ್ಕಿಂತ ಪೂರ್ವದಲ್ಲಿ ಗಂಡು, ಹೆಣ್ಣು ಎಂಬ ತಾರತಮ್ಯ ಮಾಡದೆ ದೇವರ ದಾಸಿಮಯ್ಯ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ್ದರು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಗುರುವಾರ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಏರ್ಪಡಿಸಿದ್ದ ವಚನಕಾರ ದೇವರ ದಾಸಿಮಯ್ಯ ಅವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಸಮಾನತೆಯ ಪ್ರತೀಕವಾದ ವಚನಗಳನ್ನು ನೀಡುವ ಮೂಲಕ ಮಾನವ ಕುಲಕ್ಕೆ ದಾರಿದೀಪವಾದವರು. ಅವರ ವಚನಗಳು ಸಮಾಜದಲ್ಲಿ ಹೇಗೆ ಬದುಕಬೇಕು, ನಡೆ–ನುಡಿ ಯಾವ ರೀತಿಯಾಗಿರಬೇಕು ಎಂಬುದನ್ನು ತಿಳಿಸಿಕೊಡುತ್ತವೆ’ ಎಂದರು.

‘ವಚನ ಸಾಹಿತ್ಯವನ್ನು ಪ್ರತಿಯೊಬ್ಬರೂ ಓದಬೇಕು. ಕಾಯಕ ದಾಸೋಹ ತತ್ವ ಅರ್ಥೈಸಿಕೊಂಡಾಗ ಮಾತ್ರ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ’ ಎಂದು ಹೇಳಿದರು.

ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ಉಪನ್ಯಾಸ ನೀಡಿ, ‘ದೇವರ ದಾಸಿಮಯ್ಯರ ವಚನಗಳನ್ನು ಮರೆತರೆ ಕನ್ನಡದ ವೇದ ಮರೆತಂತೆ. ಹರಿಹರ, ಬಸವಣ್ಣ, ರಾಘವಾಂಕ, ಅನುಭವ ಮಂಟಪದ ವಚನಕಾರರ ಮೇಲೆ ದೇವರ ದಾಸಿಮಯ್ಯ ವಚನಗಳು ಪ್ರಭಾವ ಬೀರಿವೆ. ಇದೂವರೆಗೂ ಅವರ 170 ವಚನಗಳು ದೊರೆತಿವೆ. ಆ ವಚನಗಳನ್ನು ವಿಶ್ವವ್ಯಾಪಿ ಪಸರಿಸ ಬೇಕಾಗಿದೆ. ಕನ್ನಡ ಭಾಷೆಯ ವಚನಗಳನ್ನು ಇಂಗ್ಲಿಷ್, ಹಿಂದಿ ಭಾಷೆಗೆ ಅನುವಾದ ಮಾಡಬೇಕಾಗಿದೆ. ನೇಕಾ

ರರ ಬಗ್ಗೆ ದಾಸಿಮಯ್ಯ ಅವರು ಸಾಕಷ್ಟು ವಚನಗಳನ್ನು ರಚಿಸಿದ್ದಾರೆ’ ಎಂದರು.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಸುರಪುರ ತಾಲ್ಲೂಕಿನ ಮುದನೂರಿನಲ್ಲಿ ದಾಸಿಮ

ಯ್ಯ ಜನಿಸಿದ್ದು ಈ ಭಾಗದ ಪುಣ್ಯ ಎಂದರು.

ಮೇಯರ್ ಶರಣಕುಮಾರ ಮೋದಿ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಸುಲ್ತಾನಪುರ, ಹಟಗಾರ ಸಮಾಜದ ಕಾರ್ಯದರ್ಶಿ ವಿನೋದ ಕುಮಾರ ಜನವರಿ, ರೇವಣಸಿದ್ದಪ್ಪ ಗುಡ್ಡದ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು.

ಸಮಾರಂಭಕ್ಕೂ ಮುನ್ನ ದೇವರ ದಾಸಿಮಯ್ಯ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಮಕ್ತಂಪುರ

ದಿಂದ ಪ್ರಾರಂಭವಾದ ಮೆರವಣಿಗೆ ಹೋಳಿಕಟ್ಟಾ, ಸರಾಫ್ ಬಜಾರ್, ಕಪಡಾ ಬಜಾರ್, ಪೊಲೀಸ್ ಚೌಕ್, ಸೂಪರ್ ಮಾರ್ಕೆಟ್, ಜಗತ್ ವೃತ್ತದ ಮೂಲಕ ರಂಗಮಂದಿರ ತಲುಪಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry