ಬಡವರಿಗೆ ಮೀಸಲಾತಿ ಸವಲತ್ತು ಕಲ್ಪಿಸಿ

7
ರೇಣುಕಾಚಾರ್ಯರ ಯುಗಮಾನೋತ್ಸವ: ಎಸ್.ಆರ್.ನವಲಿಹಿರೇಮಠ ಒತ್ತಾಯ

ಬಡವರಿಗೆ ಮೀಸಲಾತಿ ಸವಲತ್ತು ಕಲ್ಪಿಸಿ

Published:
Updated:

ಹುನಗುಂದ: ‘ಜಂಗಮರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಜಾತಿಯ ಬಡವರಿಗೂ ರಾಜ್ಯ ಸರ್ಕಾರ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸ ಲಾತಿ ನೀಡಬೇಕು’ ಎಂದು ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಒತ್ತಾಯಿಸಿದರು.

ಪಟ್ಟಣದ ಬಸವ ಮಂಟಪದಲ್ಲಿ ತಾಲ್ಲೂಕು ವೀರಮಹೇಶ್ವರ ಜಂಗಮ ಸಮಾಜ ಸಂಸ್ಥೆ ಬುಧವಾರ ಆಯೋಜಿಸಿದ್ದ ಆದಿಜಗದ್ಗುರು ರೇಣುಕಾ ಚಾರ್ಯರ ಯುಗಮಾನೋತ್ಸವ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅಂದಾಜು 35 ರಿಂದ 45 ಲಕ್ಷ ಜಂಗಮರು ಇದ್ದಾರೆ. 3,600ಕ್ಕೂ ಹೆಚ್ಚು ಮಠ ಗಳಿವೆ. ಶೇ 90 ರಷ್ಟು ಮಠಗಳಿಗೆ ಜಂಗಮರೇ ಸ್ವಾಮಿಗಳಾಗಿದ್ದಾರೆ. ನಮ್ಮ ಸಮುದಾಯಕ್ಕೆ ಗೌರವ ಲಭಿಸ ಬೇಕೆಂದರೆ, ಪಾರಂಪರಿಕವಾದ ಪೂಜಾ ವಿಧಾನ, ಲಿಂಗಧಾರಣಾ ತತ್ವ, ಸಂಸ್ಕಾರ-,ಸಂಸ್ಕೃತಿಯನ್ನು ನಾವು ಮೊದಲು ಪಾಲಿಸಿಕೊಂಡು ಬರಬೇಕಿದೆ’ ಎಂದರು.

‘ಎಲ್ಲಾ ಸಮಾಜಕ್ಕೂ ಒಳಿತು ಬಯಸುವ ಜಂಗಮ ಸಮಾಜ ಆರ್ಥಿಕವಾಗಿ ಇಂದು ದುಃಸ್ಥಿತಿಯಲ್ಲಿದೆ. ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ತರಲು ಎಲ್ಲರೂ ಸಂಕಲ್ಪ ತೊಡಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ತಾಲ್ಲೂಕಿನಲ್ಲಿ ಜಂಗಮರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುವುದು ಮುಖ್ಯವಲ್ಲ. ನೂರರ ಸಂಖ್ಯೆಯಲ್ಲಿಯೇ ಇರಲಿ ಅವರ ಮತಗಳು ರಾಜಕಾರಣಿಗಳಾದ ನಮಗೆ ಮುಖ್ಯ. ಎಲ್ಲ ಸಮುದಾಯದವರನ್ನು ಸಮಾನವಾಗಿ ಕಾಣದೇ ಜಾತಿಯ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಇಂದು ನಡೆಯುತ್ತಿದೆ ಎಂದರು.

ಬೇಡಜಂಗಮ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ದಾರುಕೇಶ್ವರಯ್ಯ ಮಾತನಾಡಿ, ಈಗಾಗಲೇ ಬೇಡಜಂಗಮ ಪ್ರಮಾಣ ಪತ್ರ ಬೆಂಗಳೂರು, ತುಮ ಕೂರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಪಡೆಯ ಲಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಕೂಡಾ ಬೇಡಜಂಗಮ ಪ್ರಮಾಣ ಪತ್ರ ಪಡೆಯಲು ನಮ್ಮ ಸಂಘಟನೆ ಪ್ರಯತ್ನಿಸಲಿದೆ ಎಂದರು.

ಬೇಡಜಂಗಮ ಸಮಾಜದ ಬೆಳಗಾವಿ ವಲಯದ ಅಧ್ಯಕ್ಷ ವಿರೇಶ ಕೂಡಲಗಿಮಠ ಮಾತನಾಡಿ, ‘ಜಂಗಮ ಸಮಾಜವನ್ನು ಎಲ್ಲಾ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಮಾಡಿವೆ. ಪ್ರಸಕ್ತ ಚುನಾವಣೆಯಲ್ಲಿ ಜಂಗಮರು ಸಂಖ್ಯೆಯಲ್ಲಿ ಕಡಿಮೆ ಇರಬಹುದು. ಆದರೆ, ಮತವನ್ನು ಹಾಕಿಸುವಲ್ಲಿ, ಮತ ಹಾಕದಂತೆ ನೋಡಿಕೊಳ್ಳುವಲ್ಲಿ ಸಮಾಜದ ಸಂಘಟನೆ ಬಲಪಡಿ ಸುವುದಾಗಿ ಹೇಳಿದರು.

ನಂದವಾಡಗಿಯ ಮಹಾಂತೇಶ್ವರ ಮಠದ ಚೆನ್ನಬಸವ ದೇವರು ಮಾತನಾಡಿದರು. ದಾನೇಶ್ವರಿ ಸಾರಂಗಮಠ ಉಪನ್ಯಾಸ ನೀಡಿದರು. ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು, ಬಿಲ್ ಕೆರೂರ ಸಿದ್ಧಲಿಂಗ ಶಿವಾಚಾರ್ಯರು, ದಾಸಬಾಳದ ವೀರೇಶ್ವರ ಸ್ವಾಮಿಗಳು, ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ, ಮಹಾಂತಯ್ಯ ಗಚ್ಚಿನಮಠ, ಜಿ.ಬಿ.ಕಂಬಾಳಿಮಠ, ವೀರಭದ್ರಯ್ಯ ಸರಗಣಾಚಾರಿ, ಶಾಂತಯ್ಯ ಮಠ, ವಿರೇಶ ದಮ್ಮೂರಮಠ, ಡಿ.ಬಿ.ಮಠಪತಿ, ಎಂ.ಎಸ್.ಮಠ ಮಹಾಂತೇಶ ಶಿವಪ್ಪಯ್ಯನಮಠ, ಅಪ್ಪು ಜಡಿಮಠ, ಬಸಯ್ಯ ಹಿರೇಮಠ, ಸಿದ್ದು ಸಾರಂಗಮಠ, ಜಂಗಮ ಸಮಾಜದ ರಾಜ್ಯಾಧ್ಯಕ್ಷೆ ಸುಜಾತಾ, ಪುರಸಭೆಯ ಅಧ್ಯಕ್ಷೆ ಗಂಗಮ್ಮ ಎಮ್ಮಿ, ಮಳೆಪ್ಪಯ್ಯ ಹಿರೇಮಠ, ಮಲ್ಲಯ್ಯ ಮೂಗನೂರಮಠ, ಸಂಗಯ್ಯ, ಮಲ್ಲನಗೌಡ ಗೌಡರ, ಚೆನ್ನಬಸಯ್ಯ ಹಿರೊಳ್ಳಿಮಠ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry