ವಿಜಯಪುರ: 23 ವಾರ್ಡ್‌ಗಳ ಪುನರ್ ವಿಂಗಡಣೆ

7

ವಿಜಯಪುರ: 23 ವಾರ್ಡ್‌ಗಳ ಪುನರ್ ವಿಂಗಡಣೆ

Published:
Updated:

ವಿಜಯಪುರ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿನ 23ವಾರ್ಡ್‌ಗಳನ್ನು ಪುನರ್ ವಿಂಗಡಣೆ ಮಾಡಿ, ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎಲ್.ಬಾಗಲವಾಡೆ ಅವರು ಕರ್ನಾಟಕ ರಾಜ್ಯ ಪತ್ರದಲ್ಲಿ ಘೋಷಣೆ ಮಾಡಿದ್ದಾರೆ.

1ನೇವಾರ್ಡ್ ಅಶೋಕ ನಗರ ಉತ್ತರ: ದೇವನಹಳ್ಳಿ ರಸ್ತೆ, ದಕ್ಷಿಣ : ಪುರಸಭೆ ಗಡಿ, ಪೂರ್ವ: ಸರ್ಕಾರಿ ಆಟದ ಮೈದಾನ ಮತ್ತು ರಾಜಕಾಲುವೆ, ಪಶ್ಚಿಮ: ದೇವನಹಳ್ಳಿ ರಸ್ತೆ ದರ್ಗಾ ದೇವಾಲಯ, ಪುರಸಭೆ ಗಡಿ (ಹಿಂದುಳಿದ ವರ್ಗ ಎ ಮಹಿಳೆ ).

2ನೇ ವಾರ್ಡ್ ಬಸವೇಶ್ವರ ಬಡಾವಣೆ ಉತ್ತರಕ್ಕೆ: ಚಿಕ್ಕಬಳ್ಳಾಪುರ ರಸ್ತೆ, ದಕ್ಷಿಣ: ದೇವನಹಳ್ಳಿ ರಸ್ತೆ, ಪೂರ್ವ : ದೇವನಹಳ್ಳಿ ಬೈಪಾಸ್ ರಸ್ತೆ, ರಾಜಕಾಲುವೆ, ಪಶ್ಚಿಮ: ಪುರಸಭೆ ಗಡಿ, ಚನ್ನಮ್ಮ ಬಡಾವಣೆ (ಸಾಮಾನ್ಯ).

3 ನೇ ಭರತ್ ನಗರ ಉತ್ತರಕ್ಕೆ: ಚಿಕ್ಕಬಳ್ಳಾಪುರ ರಸ್ತೆ, ದಕ್ಷಿಣ : ಬಸವೇಶ್ವರ ನಗರ ರಸ್ತೆ, ಪೂರ್ವ: ವಾರ್ಡ್ ನಂಬರ್ 2ರ ಗಡಿ, ಪಶ್ಚಿಮ: ಪುರಸಭೆ ಗಡಿ, (ಹಿಂದುಳಿದ ವರ್ಗ ಬಿ ಮಹಿಳೆ )

4ನೇ ವಾರ್ಡ್ ಶಿಡ್ಲಘಟ್ಟ ಡಿವಿಯೇಷನ್ ರಸ್ತೆ ಉತ್ತರಕ್ಕೆ: ಪುರಸಭೆ ಗಡಿ, ದಕ್ಷಿಣ: ಚಿಕ್ಕಬಳ್ಳಾಪುರ ರಸ್ತೆ, ಪೂರ್ವ: ಪ್ರಗತಿ ಶಾಲೆ ಹಿಂಭಾಗದ ರಸ್ತೆ, ಪಶ್ಚಿಮ:ಅಮಾನಿಕೆರೆ,(ಸಾಮಾನ್ಯ ಮಹಿಳೆ )

5‌ನೇ ವಾರ್ಡ್ ರೆಡ್ಡಿ ಬೀದಿ ಉತ್ತರಕ್ಕೆ: ಪುರಸಭೆ ಗಡಿ, ದಕ್ಷಿಣ: ಚಿಕ್ಕಬಳ್ಳಾಪುರ ರಸ್ತೆ, ಪೂರ್ವ: ಎವರ್ ಗ್ರೀನ್ ಶಾಲೆ ರಸ್ತೆ ಮತ್ತು ಚರ್ಚ್ ರಸ್ತೆ, ಪಶ್ಚಿಮ ಪ್ರಗತಿ ಶಾಲೆ ಹಿಂಭಾಗದ ರಸ್ತೆ (ಹಿಂದುಳಿದ ವರ್ಗ –ಎ ಮಹಿಳೆ)

6ನೇ ವಾರ್ಡ್ ಚನ್ನಕೇಶವಸ್ವಾಮಿ ದೇವಸ್ಥಾನದ ರಸ್ತೆ ಉತ್ತರಕ್ಕೆ:

ಶ್ರೀಧರ್ಮ ರಾಯಸ್ವಾಮಿ ದೇವಾಲಯದ ರಸ್ತೆ, ದಕ್ಷಿಣ: ಚಿಕ್ಕಬಳ್ಳಾಪುರ ರಸ್ತೆ,

ಪೂರ್ವ: ಎಂ.ಪಿ.ಜಿ.ಎಸ್ ಶಾಲೆ ರಸ್ತೆ, ಪಶ್ಚಿಮ: ಎವರ್ ಗ್ರೀನ್ ರಸ್ತೆ,(ಸಾಮಾನ್ಯ ಮಹಿಳೆ ) 7ನೇ ವಾರ್ಡ್ ಕೋಟೆ ಬೀದಿ ಉತ್ತರಕ್ಕೆ: ಚನ್ನಕೇಶವಸ್ವಾಮಿ ದೇವಾಲಯದ ರಸ್ತೆ, ದಕ್ಷಿಣ: ಮಾರ್ಕೆಟ್ ರಸ್ತೆ, ಪೂರ್ವ : ವಾರ್ಡ್ ನಂ 16ರ ಗಡಿ, ಪಶ್ಚಿಮ: ಚನ್ನಕೇಶವಸ್ವಾಮಿ ದೇವಾಲಯದ ರಸ್ತೆ (ಹಿಂದುಳಿದ ವರ್ಗ –ಬಿ)

8ನೇ ವಾರ್ಡ್ ಮಾರ್ಕೆಟ್ ರಸ್ತೆ ಉತ್ತರ: ಮಾರ್ಕೆಟ್ ರಸ್ತೆ, ಟೆಲಿಪೋನ್ ಆಫೀಸ್ ರಸ್ತೆ, ದಕ್ಷಿಣ: ಕೋಲಾರ ರಸ್ತೆ, ಪೂರ್ವ:  ಮಾಲೂರು ರಸ್ತೆ, ವಾರ್ಡ್ ನಂ 16ರ ಗಡಿ, ಪಶ್ಚಿಮ ಎಂ.ಪಿ.ಜಿ.ಎಸ್ ಶಾಲೆ ರಸ್ತೆ (ಪರಿಶಿಷ್ಟ ಪಂಗಡ)

9ನೇ ವಾರ್ಡ್ ಪ್ರಶಾಂತ ನಗರ ಉತ್ತರ: ಕೋಲಾರ ರಸ್ತೆ, ಮಂಡಿಬೆಲೆ ರಸ್ತೆ, ದಕ್ಷಿಣ : ಪುರಸಭೆ ಗಡಿ, ಪೂರ್ವ : ಚನ್ನರಾಯಪ್ಪಬಡಾವಣೆ 4 ನೇ ಕ್ರಾಸ್ ಮಂಡಿಬೆಲೆ ರಸ್ತೆ, ಪಶ್ಚಿಮ: ಸರ್ಕಾರಿ ಆಟದ ಮೈದಾನ ಮತ್ತು ರಾಜಕಾಲುವೆ (ಹಿಂದುಳಿದ ವರ್ಗ–ಎ ಮಹಿಳೆ )

10 ಬಲಿಜ ಬೀದಿ ಉತ್ತರ: ದೊಡ್ಡಮೋರಿ ದಕ್ಷಿಣ : ಟೆಲಿಪೋನ್ ಆಫಿಸ್ ರಸ್ತೆ, ಪೂರ್ವ: ದೊಡ್ಡಮೋರಿ ಸ್ಮಶಾನದ ರಸ್ತೆ, ವೆಂಕಟರವಣಸ್ವಾಮಿ ದೇವಾಲಯದ ರಸ್ತೆ, ಪಶ್ಚಿಮ : ಮೇಲೂರು ರಸ್ತೆ,(ಸಾಮಾನ್ಯ).

11ನೇ ವಾರ್ಡ್ ಚನ್ನಕೇಶವ ದೇವಾಲಯ ಬೀದಿ, ಧರ್ಮರಾಯಸ್ವಾಮಿ ದೇವಾಲಯ ಬೀದಿ ಉತ್ತರ: ಪುರಸಭೆ ಗಡಿ, ದಕ್ಷಿಣ : ಚನ್ನಕೇಶವಸ್ವಾಮಿ ದೇವಾಲಯದ ರಸ್ತೆ, ಪೂರ್ವ: ಮೇಲೂರು ರಸ್ತೆ, ದೊಡ್ಡಮೋರಿ ಸ್ಮಶಾನದ ರಸ್ತೆ, ಪಶ್ಚಿಮ : ಚನ್ನಕೇಶವಸ್ವಾಮಿ ದೇವಸ್ಥಾನ (ಸಾಮಾನ್ಯ)

12 ನೇ ವಾರ್ಡ್ ದುರ್ಗಾತಾಯಿ ಕಾಲೊನಿ ಉತ್ತರ : ಬಜಾರ್ ರಸ್ತೆ, ದಕ್ಷಿಣ ಹರಿಜನ ಕುಂಟೆ ರಸ್ತೆ, ಪೂರ್ವ ಗುರಪ್ಪನಮಠದ ರಸ್ತೆ, ಪಶ್ಚಿಮ : ವೆಂಕಟರಣಸ್ವಾಮಿ ದೇವಾಲಯ ರಸ್ತೆ, (ಸಾಮಾನ್ಯ ಮಹಿಳೆ ).

13 ನೇ ವಾರ್ಡ್ ಗುರಪ್ಪನಮಠ ಉತ್ತರ: ವಾರ್ಡ್ 14, 20 ರ ಗಡಿ, ದಕ್ಷಿಣ : ಮಹಬೂಬ್ ನಗರ ರಸ್ತೆ, ವಾರ್ಡ್ 22 ರ ಗಡಿ, ಪೂರ್ವ : ಸರ್ಧಾರ್ ಬಡಾವಣೆ, 22 ರ ಗಡಿ, ಎ.ಡಿ.ಕಾಲೋನಿ, ಪಶ್ಚಿಮ: ಮೂಡಲ ಆಂಜನೇಯಸ್ವಾಮಿ ದೇವಾಲಯದ ರಸ್ತೆಯಿಂದ ಕಾಟಿಮರಾಯಸ್ವಾಮಿ ದೇವಾಲಯ ರಸ್ತೆ, ಗುರಪ್ಪನಮಠ ರಸ್ತೆ, ಮಹಬೂಬ್ ನಗರ ರಸ್ತೆ (ಪರಿಶಿಷ್ಟ ಜಾತಿ ಮಹಿಳೆ).

14 ನೇ ವಾರ್ಡ್ ಸುಣ್ಣಕಲ್ಲು ಗೂಡು ಬೀದಿ ಉತ್ತರ: ತೊಟದ ಮನೆಗಳು, ಪುರಸಭೆ ಗಡಿ, ದಕ್ಷಿಣ : ಕೊರಚರ ಬೀದಿ, ಯಲ್ಲಮ್ಮನ ದೇವಾಲಯ, ಯಲುವಹಳ್ಳಿ ರಸ್ತೆ, ಪೂರ್ವ : ಪುರಸಭೆ ಗಡಿ, ಪಶ್ಚಿಮ : ದೊಡ್ಡಮೋರಿ ಸ್ಮಶಾನದ ರಸ್ತೆ, ( ಹಿಂದುಳಿದ ವರ್ಗ–ಎ ಮಹಿಳೆ).

15 ನೇ ವಾರ್ಡ್ ಶಾಂತಿನಗರ ಉತ್ತರ : ಕೋಲಾರ ರಸ್ತೆ, ದಕ್ಷಿಣ : ಪುರಸಭೆ ಗಡಿ, ಪೂರ್ವ : ಪುರಸಭಾ ಗಡಿ, ಪಶ್ಚಿಮ : ಶಾಂತಿನಗರ 1 ನೇ ಕ್ರಾಸ್ (ಸಾಮಾನ್ಯ),

16 ನೇ ವಾರ್ಡ್ ಸತ್ಯಮ್ಮ ಕಾಲೊನಿ ಉತ್ತರ:

ಹರಿಜನ ಕುಂಟೆ ರಸ್ತೆ, ದಕ್ಷಿಣ : ಕೋಲಾರ ಸೋಂಪುರ ರಸ್ತೆ, ಪೂರ್ವ :ವಾರ್ಡ್ 17 ರ ಗಡಿ, ಪಶ್ಚಿಮ : ಬಸ್ ನಿಲ್ದಾಣ, (ಸಾಮಾನ್ಯ), 17 ನೇ ವಾರ್ಡ್ ಸುಲಾಲ್ ದಿನ್ನೆ ಉತ್ತರ : ಹರಿಜನ ಕುಂಟೆ ರಸ್ತೆ,ದಕ್ಷಿಣ : ಕೋಲಾರ ರಸ್ತೆ, ಪೂರ್ವ : ಗುರಪ್ಪನಮಠದ ರಸ್ತೆ, ಚಂದ್ರಕಲಾ ವುಡ್ ವರ್ಕ್ ರಸ್ತೆ,

ಪಶ್ಚಿಮ : ಕೂಬಾ ಮಸೀದಿ ರಸ್ತೆಯಿಂದ ಹರಿಜನ ಕುಂಟೆ ರಸ್ತೆವರೆಗೆ( ಸಾಮಾನ್ಯ ಮಹಿಳೆ), 18 ನೇ ವಾರ್ಡ್ ಮಂಡಿಬೆಲೆ ರಸ್ತೆ ಉತ್ತರ : ಕೋಲಾರ ಸೋಂಪುರ ರಸ್ತೆ, ದಕ್ಷಿಣ: ರಾಜಕಾಲುವೆ 23 ರ ಗಡಿ, ಪೂರ್ವ : ಶಾಂತಿನಗರ 1 ನೇ ಕ್ರಾಸ್, ಪಶ್ಚಿಮ : ಸುಜ್ಞಾನ ನಗರ, ಮಂಡಿಬೆಲೆ ರಸ್ತೆ, (ಹಿಂದುಳಿದ ವರ್ಗ–ಎ)

19 ನೇ ವಾರ್ಡ್ ರಾಜೀವ್ ನಗರ ಉತ್ತರ : ರಾಜಕಾಲುವೆ 15 ರ ಗಡಿ, ದಕ್ಷಿಣ : ಪುರಸಭೆ ಗಡಿ, ಪೂರ್ವ : ಪುರಸಭೆ ಗಡಿ, ಪಶ್ಚಿಮ : ರಹಮತ್ ನಗರ 1 ನೇ ಮುಖ್ಯರಸ್ತೆ, ( ಹಿಂದುಳಿದ ವರ್ಗ –ಎ), 20 ನೇ ವಾರ್ಡ್ ಇಂದಿರಾನಗರ ಉತ್ತರ ; ಯಲುವಹಳ್ಳಿ ರಸ್ತೆ, ದಕ್ಷಿಣ : ನಗರ್ತ ಸ್ಮಶಾನದ ರಸ್ತೆ, ಪೂರ್ವ : ಪುರಸಭೆ ಗಡಿ, ಪಶ್ಚಿಮ: ಎ.ಡಿ.ಕಾಲೊನಿ ರಸ್ತೆ, (ಪರಿಶಿಷ್ಟ ಜಾತಿ)

21 ನೇ ವಾರ್ಡ್ ಜೆ.ಸಿ.ಬಡಾವಣೆ ಉತ್ತರ : ಚಿಕ್ಕಬಳ್ಳಾಪುರ ರಸ್ತೆ, ದಕ್ಷಿಣ : ಅಶೋಕನಗರ 2 ನೇ ಕ್ರಾಸ್, ಪೂರ್ವ: ಪುರಸಭೆ ಕಚೇರಿ ಆಟದ ಮೈದಾನ ರಸ್ತೆ, ಪಶ್ಚಿಮ : ಬೈಪಾಸ್ ರಸ್ತೆ, ರಾಜಕಾಲುವೆ, ಅಶೋಕನಗರ ರಸ್ತೆ, ( ಸಾಮಾನ್ಯ)

22 ನೇ ವಾರ್ಡ್ ಮಹಬೂಬ್ ನಗರ ಉತ್ತರ: ಬಸವನಕುಂಟೆ ರಸ್ತೆ, ಮಹಬೂಬ್ ನಗರ ರಸ್ತೆ, ನಗರ್ತ ಸ್ಮಶಾನದ ರಸ್ತೆ,ದಕ್ಷಿಣ :

ಕೋಲಾರ ರಸ್ತೆ, ಪೂರ್ವ : ಪುರಸಭೆ ಗಡಿ, ಪಶ್ಚಿಮ : ಚಂದ್ರಕಲಾ ವುಡ್ ವರ್ಕ್ಸ್ ರಸ್ತೆ, (ಸಾಮಾನ್ಯ ಮಹಿಳೆ), 23 ನೇ ವಾರ್ಡ್ ರಹಮತ್ ನಗರ ಉತ್ತರ : ರಾಜಕಾಲುವೆ 18 ರ ಗಡಿ, ದಕ್ಷಿಣ : ಪುರಸಭಾ ಗಡಿ, ಪೂರ್ವ : ರಹಮತ್ ನಗರ 1 ನೇ ಮುಖ್ಯರಸ್ತೆ, 19 ರಗಡಿ, ಪಶ್ಚಿಮ : ಚನ್ನರಾಯಪ್ಪ ಬಡಾವಣೆ 4 ನೇ ಕ್ರಾಸ್, 9 ಗಡಿ ( ಸಾಮಾನ್ಯ ಮಹಿಳೆ) ಗೆ ಮೀಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry