7

ಪ್ರವಾಸದ ಖರ್ಚಿಗೆ ಕಡಿವಾಣ

Published:
Updated:
ಪ್ರವಾಸದ ಖರ್ಚಿಗೆ ಕಡಿವಾಣ

ಪ್ರವಾಸ ಹೋಗುವಾಗ ದೊಡ್ಡ ತಲೆನೋವೆಂದರೆ ಖರ್ಚಿನದ್ದು. ಪ್ರವಾಸ ಹೋಗಲು ಅಣಿಯಾಗಿದ್ದರೆ ನಿಮ್ಮ ಬಜೆಟ್‌ ಬಗ್ಗೆ ಲೆಕ್ಕಾಚಾರ ಹಾಕಿಕೊಳ್ಳಿ. ಇಲ್ಲದಿದ್ದರೆ ಜೇಬು ಖಾಲಿ ಮಾಡಿಕೊಂಡು ಬರಬೇಕಾದ ಸಂದರ್ಭ ಬಂದೀತು ಜೋಕೆ.

* ಪ್ರವಾಸ ಕೈಗೊಳ್ಳುವಾಗ ಕೆಲವು ಪ್ಯಾಕೇಜ್‌ ಟೂರ್‌ಗಳಲ್ಲಿ ಆಫರ್‌, ರಿಯಾಯಿತಿ ಇರುತ್ತದೆ. ಇಂತಹ ಪ್ರಯೋಜನ ಪಡೆದುಕೊಳ್ಳಿ. ವಿಮಾನದಲ್ಲಿ ಹೋಗುವುದಾದರೆ ಆಫರ್‌ಗಳು ಇರುವಾಗಲೇ ಪ್ರಯಾಣಕ್ಕೆ ಯೋಜನೆ ಹಾಕಿಕೊಳ್ಳಿ. ಇದರಿಂದ ಭಾರಿ ಉಳಿತಾಯವಾಗುತ್ತದೆ.

* ಪ್ರವಾಸ ಹೊರಡುವ ಮೊದಲು ನಿಮ್ಮ ಬಜೆಟ್‌, ಎಷ್ಟು ಹಣವನ್ನು ಖರ್ಚು ಮಾಡಬಹುದು ಎಂಬುದನ್ನು ಪಟ್ಟಿ ಮಾಡಿಕೊಳ್ಳಿ. ಅದಕ್ಕೆ ಬದ್ಧವಾಗಿರಿ.

* ಪ್ರವಾಸಕ್ಕೆ ಸಂಬಂಧಿಸಿದ ಮಾಹಿತಿಗಳು ಇಂಟರ್‌ನೆಟ್‌ನಲ್ಲಿ ಲಭ್ಯವಿರುತ್ತವೆ. ನೀವು ಹೋಗುವ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ. ಕಡಿಮೆ ಬೆಲೆಗೆ ಗುಣಮಟ್ಟದ ಹೋಟೆಲ್‌ ಎಲ್ಲಿದೆ ಎಂಬೆಲ್ಲ ಮಾಹಿತಿಯನ್ನು ಪಡೆಯಿರಿ. ಉಚಿತವಾಗಿ ಇಂಟರ್‌ ನೆಟ್‌, ಪಾರ್ಕಿಂಗ್‌ ವ್ಯವಸ್ಥೆಯಿರುವ ಹೋಟೆಲ್‌ ಆಯ್ಕೆ ಮಾಡಿ. ನೀವು ಹೋಗುವ ಊರಿನಲ್ಲಿ ಉಚಿತವಾಗಿ ಮತ್ತು ಕಡಿಮೆ ಬೆಲೆಯ ಪ್ರವಾಸಿ ಸ್ಥಳಗಳಿಗೆ ಹೋಗಲು ಆದ್ಯತೆ ನೀಡಿ.

* ಪ್ರವಾಸಕ್ಕೆ ಹೋದ ಸ್ಥಳದಲ್ಲಿ ಕಂಡಿದ್ದೆಲ್ಲವನ್ನು ಖರೀದಿಸದಿರಿ. ಅದು ಅಗತ್ಯವೇ, ನಿಮ್ಮ ಊರಿನಲ್ಲಿ ಅದಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತದೆಯೇ ಎಂಬುದನ್ನು ಅವಲೋಕಿಸಿ ವಸ್ತುಗಳನ್ನು ಖರೀದಿಸಲು ಮುಂದಾಗಿ.

* ಸಮೀಪದಲ್ಲಿಯೇ ಪ್ರವಾಸ ಹೋಗುವಿರಾದರೆ ಮನೆಯಿಂದಲೇ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ. ಇದರಿಂದ ಬೇರೆ ಊರಿನಲ್ಲಿ ಹೆಚ್ಚಿನ ಹಣ ಕೊಟ್ಟು ವಸ್ತುಗಳನ್ನು ಕೊಳ್ಳುವುದು ತಪ್ಪುತ್ತದೆ.

* ಕುಡಿಯುವ ನೀರಿಗೆಂದೇ ಸಾಕಷ್ಟು ಹಣ ಖರ್ಚಾಗುತ್ತೆ. ಹೋದಲೆಲ್ಲ ನೀರಿನ ಬಾಟಲಿ ತೆಗೆದುಕೊಳ್ಳುವ ಬದಲು, ಉತ್ತಮ ಗುಣಮಟ್ಟದ ನೀರಿನ ಬಾಟಲಿಗಳಲ್ಲಿ ನೀರು ತುಂಬಿಸಿಕೊಂಡು ಕುಡಿಯುವುದು ಉತ್ತಮ ಆಯ್ಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry