ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

7
ಗ್ರಾಮೀಣಾಭಿವೃದ್ಧಿ, ನೀರಾವರಿಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ: ಯಾವಗಲ್

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Published:
Updated:

ಹೊಳೆಆಲೂರ (ರೋಣ): ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ವಿಶೇಷವಾಗಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಸಿಂಹಪಾಲು ನೀಡಲಾಗಿದೆ ಎಂದು ಶಾಸಕ ಬಿ.ಆರ್.ಯಾವಗಲ್ ಹೇಳಿದರು.

ತಾಲ್ಲೂಕಿನ ಕುರವಿನಕೊಪ್ಪ ಗ್ರಾಮದಲ್ಲಿ ಹೊಳೆಆಲೂರಿನಿಂದ–ಕುರುವಿನಕೊಪ್ಪವರೆಗೆ ₹ 2.67 ಕೋಟಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಲಪ್ರಭಾ ನದಿ ನವಿಲುತಿರ್ಥ ಜಲಾಶಯದ ಕಾಲುವೆಗಳಿಗೆ ₹ 1,049 ಕೋಟಿ ಬಿಡುಗಡೆ ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ನರಗುಂದಮತಕ್ಷೇತ್ರದ ಕಾಲುವೆಗಳನ್ನು ರಿಪೇರಿ ಮಾಡಿಸಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿದ್ದ ಶೇ 90ರಷ್ಟು ಭರವಸೆಗಳನ್ನು ಈಡೇರಿಸಿದೆ. ಅನೇಕ ಭಾಗ್ಯಗಳನ್ನು ನೀಡಿ ಕಲ್ಯಾಣ ರಾಜ್ಯದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿಶ್ರಮಿಸುತ್ತಿದೆ ಎಂದರು.

ಮಲ್ಲಿಕಾರ್ಜುನ ಕೊಳೇರಿ, ಬಿ.ಆರ್.ಹಿರೇಗೌಡ್ರ, ಫಕ್ಕೀರಪ್ಪ ಚಿಕ್ಕಮಣ್ಣೂರ, ಬಿ.ಎಲ್.ಶಿರಗುಂಪಿ, ಸುಮಂಗಲಾ ಕಾತರಕಿ, ಸರೋಜಮ್ಮ ಗೌರಿಮಠ, ಶಾಂತಕ್ಕ ಅರಳಿಮಟ್ಟಿ, ವಿ.ಜಿ.ಜಂಬಲದಿನ್ನಿ, ಪ್ರಕಾಶ ಭಜಂತ್ರಿ, ಬಸವರಾಜ ಪಾಟೀಲ, ಅಮರೇಶಗೌಡ ಗೌಡರ, ಹವಳಪ್ಪ ಮಾದರ, ಈಶ್ವರ ಭಜಂತ್ರಿ ಹಾಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry