ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಹೋಂ ಸ್ಟೇ ಮಾಲೀಕರಿಗೆ ಸೂಚನೆ

Last Updated 23 ಮಾರ್ಚ್ 2018, 11:25 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ‘ಚುನಾವಣೆಗೆ ನೀತಿ ಸಂಹಿತೆ ಶೀಘ್ರವೇ ಜಾರಿಯಾಗುವ ನಿರೀಕ್ಷೆ ಇದ್ದು, ಹೋಂ ಸ್ಟೆ, ಹೋಟೆಲ್ ಮಾಲೀಕರು ಗ್ರಾಹಕರಿಗೆ ಮದ್ಯಸೇವನೆಗೆ ಅವಕಾಶ ನೀಡಬಾರದು’ ಎಂದು ಕುಶಾಲನಗರ ಡಿವೈಎಸ್‌ಪಿ ಶ್ರೀನಿವಾಸ್ ಎಚ್ಚರಿಸಿದರು.

‘ಮದ್ಯ ಸರಬರಾಜು ಮಾಡಬಾರದು. ತಪಾಸಣಾ ವೇಳೆ ಮದ್ಯ ಮಾರಾಟ ಕಂಡುಬಂದರೆ ಜಾಮೀನು ರಹಿತ ಬಂಧನಕ್ಕೆ ಒಳಪಡಬೇಕಾಗುತ್ತದೆ’ ಎಂದು ಗುರುವಾರ ಠಾಣೆಯಲ್ಲಿ ನಡೆದ ಸಭೆಯಲ್ಲಿ ಹೇಳಿದರು. ‘ಹೋಂ ಸ್ಟೇಗಳಿಗೆ ಬರುವ ಪ್ರವಾಸಿಗರು, ಅತಿಥಿಗಳಿಗೂ ಮದ್ಯ ತರದಂತೆ ತಿಳಿಸಬೇಕು. ಹೋಂ ಸ್ಟೇಗಳಿಗೆ ತಪಾಸಣೆಗಾಗಿ ಯಾವ ಸಮಯದಲ್ಲೂ ಭೇಟಿ ನೀಡಬಹುದು. ಗ್ರಾಹಕರು ಮದ್ಯ ಸೇವಿಸುತ್ತಿರುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

ಹೋಂ ಸ್ಟೇಗಳಿಗೆ ಬರುವ ಪ್ರತಿಯೊಬ್ಬರ ದಾಖಲಾತಿ ಪರಿಶೀಲಿಸಿ ವಾಸ್ತವ್ಯಕ್ಕೆ ಅವಕಾಶ ನೀಡಬೇಕು. ಅಹಿತಕರ ಘಟನೆಗಳು ಸಂಭವಿಸಿದರೆ ಮಾಲೀಕರೇ ಹೊಣೆ. ಅಪ್ರಾಪ್ತರು ಮತ್ತು ವಿದೇಶಿಗರು ತಂಗಿದರೆ ಸ್ಥಳೀಯ ಠಾಣೆಗಳಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

‘ಚುನಾವಣೆಯ ಸಂದರ್ಭದಲ್ಲಿ ಸಭೆ, ಔತಣಕೂಟಕ್ಕೆ ಅವಕಾಶ ನೀಡಿದಲ್ಲಿ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು.ಇಂಥ ಸಂದರ್ಭ ಪೂರ್ವ ಅನುಮತಿಯಿಲ್ಲದೆ ಮದ್ಯ ಪೂರೈಸಿದರೂ ಕ್ರಮವಹಿಸಲಾಗುವುದು’ ಎಂದರು.

ವೃತ್ತ ನಿರೀಕ್ಷಕ ಕ್ಯಾತೆಗೌಡ, ಸುಂಟಿಕೊಪ್ಪ ಪಿಎಸ್ಐ ಜಯರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT