ಕರಣ್‌ಗೆ ಟೀಶರ್ಟ್‌ ಲವ್‌!

7

ಕರಣ್‌ಗೆ ಟೀಶರ್ಟ್‌ ಲವ್‌!

Published:
Updated:
ಕರಣ್‌ಗೆ ಟೀಶರ್ಟ್‌ ಲವ್‌!

ಈ ಬಾರಿಯ ಹುಟ್ಟುಹಬ್ಬವನ್ನು ಹೇಗೆ ಆಚರಿಸಿಕೊಳ್ಳಬೇಕು ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವವರನ್ನು ಕಾಣುತ್ತೇವೆ. ಆದರೆ ಬಾಲಿವುಡ್‌ನ ಬಹುಮುಖ ಪ್ರತಿಭೆ ಕರಣ್‌ ಜೋಹರ್‌ ಕೈಗೊಂಡಿರುವ ತೀರ್ಮಾನ ಹಾಗಿಲ್ಲ. ‘ಕೆಜೋ’ಗೆ ಈಗ ತಮ್ಮ ತೂಕದ ಬಗ್ಗೆ ಚಿಂತೆ ಹೆಚ್ಚಾಗಿದೆಯಂತೆ.

ಮೇ 25 ಅವರ ಹುಟ್ಟಿದ ದಿನ. ಅದಕ್ಕೂ ಮೊದಲು ಕನಿಷ್ಠ 12 ಕೆ.ಜಿ. ತೂಕ ಇಳಿಸಿಕೊಳ್ಳಲೇಬೇಕು ಎಂಬ ಹಟಕ್ಕೆ ಬಿದ್ದಿದ್ದಾರೆ ಅವರು. ಅದಕ್ಕಾಗಿ ನಟ ರಣಬೀರ್‌ ಕಪೂರ್‌ನ ಫಿಟ್‌ನೆಸ್‌ ತರಬೇತುದಾರ ಕುನಾಲ್‌ ಗಿರ್‌ ಅವರ ಬಳಿ ಈಗಾಗಲೇ ತರಬೇತಿಯನ್ನೂ ಶುರು ಮಾಡಿರುವ ಕರಣ್‌, ಕೊಲೆಸ್ಟ್ರಾಲ್‌ ಮತ್ತು ಸಕ್ಕರೆ ರಹಿತ ಆಹಾರಕ್ರಮವುಳ್ಳ ಕಿಟೊ ಡಯಟ್‌ ಹಾಗೂ ಜಲಚಿಕಿತ್ಸೆಯನ್ನೂ ಮಾಡುತ್ತಿದ್ದಾರೆ.

ಇಷ್ಟೆಲ್ಲಾ ಕಸರತ್ತು ಯಾಕೆ ಗೊತ್ತಾ?ಹುಟ್ಟುಹಬ್ಬದಂದು ಕರಣ್‌ಗೆ ಟೀಶರ್ಟ್‌ ಹಾಕ್ಕೋಬೇಕಂತೆ. ಅಂದ ಹಾಗೆ, ಅವರಿಗೆ ಟೀಶರ್ಟು ಉಡುಗೊರೆಯಾಗಿ ಬಂದಿದೆಯೇ, ಹೊಸದಾಗಿ ಖರೀದಿಸಿ ಹಾಕ್ಕೋತಾರೆಯೇ ಎಂಬುದು ಗೌಪ್ಯವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry