ಪುರುಷನಾಮ: ಆಕ್ಷೇಪಾರ್ಹ ವ್ಯಂಗ್ಯ

7

ಪುರುಷನಾಮ: ಆಕ್ಷೇಪಾರ್ಹ ವ್ಯಂಗ್ಯ

Published:
Updated:

‘ಪುರುಷನಾಮ ಏಕೆ’ ಎಂಬ ಪತ್ರಕ್ಕೆ ಉತ್ತರಿಸುತ್ತಾ, ‘ಗಂಡನ ಹೆಸರು ಮಹಿಳೆಯ ಹೆಸರಿನ ಮುಂದಿದ್ದರೆ, ಅವಳಿಗೆ ಸ್ವಲ್ಪ ಧೈರ್ಯವೇನೋ? ಇರಲಿ ಬಿಡಿ’ ಎಂದು ಸಿ.ಪಿ.ಕೆ. ವ್ಯಂಗ್ಯವಾಡಿದ್ದಾರೆ (ವಾ.ವಾ., ಮಾ. 22).

ಪುರುಷನ ಸಹಜೀವಿಯಾದ ಮಹಿಳೆಯನ್ನು ಅನಾದಿ ಕಾಲದಿಂದಲೂ ದ್ವಿತೀಯ ದರ್ಜೆಯವಳನ್ನಾಗಿ ನಡೆಸಿಕೊಂಡು ಬರಲಾಗಿದೆ. ಕಷ್ಟ, ನೋವು, ದುಃಖ, ಅವಮಾನಗಳಿಗೆ ಈ ಸಮಾಜ ಅವಳನ್ನು ನೂಕಿರುವುದರಿಂದ ಆರಾಮ ಜೀವನದ ಸಕಲ ಸುಖ ಪಡೆದ ಪುರುಷನ ಹೆಸರಿನಿಂದ ತನ್ನನ್ನು ಗುರುತಿಸಿಕೊಳ್ಳುವ ಸ್ಥಿತಿ ಬಂದಿದೆ. ಸಿ.ಪಿ.ಕೆ. ಅವರಿಗೆ ಇದು ಗೊತ್ತಿಲ್ಲದ ವಿಚಾರವೇನಲ್ಲ. ಅವರ ಮಹಿಳಾ ವಿರೋಧಿ ಹೇಳಿಕೆಗೆ ನನ್ನ ಆಕ್ಷೇಪವಿದೆ.

-ಸರೋಜ ಎಂ.ಎಸ್., ಸಾಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry