ಕಾಂಗ್ರೆಸ್‌, ಬಿಜೆಪಿಗೆ ನಿರೀಕ್ಷೆಯ ಗೆಲುವು

7
ರಾಜ್ಯಸಭೆಗೆ ಸೈಯದ್, ಹನುಮಂತಯ್ಯ, ಚಂದ್ರಶೇಖರ್‌, ರಾಜೀವ್‌ ಆಯ್ಕೆ

ಕಾಂಗ್ರೆಸ್‌, ಬಿಜೆಪಿಗೆ ನಿರೀಕ್ಷೆಯ ಗೆಲುವು

Published:
Updated:

ಕಾಗೋಡು ತಿಮ್ಮಪ್ಪ ಹಾಗೂ ಬಾಬುರಾವ್ ಚಿಂಚನಸೂರ  ಮಾಡಿದ ಯಡವಟ್ಟು ಇಡೀ ದಿನ ನಾಟಕೀಯ ಬೆಳವಣಿಗೆಗೆ ಕಾರಣವಾಯಿತು. ರಾಜ್ಯಸಭಾ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂದು ಪಕ್ಷ ಜಾರಿ ಮಾಡಿದ ವಿಪ್‌ ಅನುಸಾರ ಮತ ಹಾಕಬೇಕು. ಅಲ್ಲದೆ, ಪಕ್ಷ ನಿಯೋಜಿಸಿದ ಮತಗಟ್ಟೆ ಏಜೆಂಟ್‌ಗೆ ಮತ ಪತ್ರ ತೋರಿಸದಿದ್ದರೆ ಅಂತಹ ಮತಗಳು ಅಸಿಂಧುವಾಗುತ್ತದೆ.ಮತದಾನ ಕೇಂದ್ರಕ್ಕೆ ಬಂದ ಕಾಗೋಡು ಮತ್ತು ಚಿಂಚನಸೂರ, ಮತಪತ್ರ (ಬ್ಯಾಲೆಟ್‌

ಪೇಪರ್) ಪಡೆದು ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಹಾಕಿದರು. ಬಳಿಕ ಪಕ್ಷದ ಏಜೆಂಟರಾಗಿದ್ದ ಬೋಸರಾಜುಗೆ ತೋರಿಸಿದರು ಪಕ್ಷದ ಅಭ್ಯರ್ಥಿ ಬಿಟ್ಟು ಬೇರೆ ಪಕ್ಷದ ಅಭ್ಯರ್ಥಿಗೆ ಈ ಇಬ್ಬರು ಮತ ಹಾಕಿದ್ದನ್ನು ಗಮನಿಸಿದ ಬೋಸರಾಜು, ‘ನೀವು ತಪ್ಪು ಮಾಡಿದ್ದೀರಿ’ ಎಂದರು.

ಕೂಡಲೇ ಚುನಾವಣಾಧಿಕಾರಿ ಎಸ್. ಮೂರ್ತಿ ಗಮನಕ್ಕೆ ತಂದರು. ಮೊದಲು ಚಲಾಯಿಸಿದ ಮತ ಪತ್ರವನ್ನು ವಾಪಸ್ ಪಡೆದ ಚುನಾವಣಾಧಿಕಾರಿ ಎರಡನೇ ಮತ ಪತ್ರವನ್ನು ನೀಡಿದರು. ಇದನ್ನು ಬಳಸಿ ಇಬ್ಬರೂ ಶಾಸಕರು ಪಕ್ಷ ನಿಗದಿಪಡಿಸಿದ್ದ ಅಭ್ಯರ್ಥಿಗೆ ಮತ ಹಾಕಿದರು.

**

ಮತ ‘ಗಣಿತ’

ಒಟ್ಟು ಶಾಸಕರು–224

ಖಾಲಿ ಇರುವ ಸ್ಥಾನ–7

ಅರ್ಹ ಮತದಾರರು–217

ಮತ ಹಾಕಿದವರು–188

ಬಹಿಷ್ಕರಿಸಿದವರು–28

ಅನಾರೋಗ್ಯದಿಂದ ಗೈರು–1

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry