ಚುನಾವಣಾ ಪ್ರಕ್ರಿಯೆ ರಕ್ಷಣೆಗೆ ಆಯೋಗ ಚರ್ಚೆ

7

ಚುನಾವಣಾ ಪ್ರಕ್ರಿಯೆ ರಕ್ಷಣೆಗೆ ಆಯೋಗ ಚರ್ಚೆ

Published:
Updated:

ನವದೆಹಲಿ: ‘ಹೊರಗಿನ ಪ್ರಭಾವಗಳಿಂದಾಗಿ’ ಚುನಾವಣಾ ಪ್ರಕ್ರಿಯೆಯಲ್ಲಿ ರಾಜಿಯಾಗದಂತೆ ಕಾಪಾಡಿಕೊಳ್ಳಲು ಯಾವ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು ಎನ್ನುವ ಕುರಿತು ಚರ್ಚೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.

ಅಮೆರಿಕದ ಮತದಾರರ ಒಲವನ್ನು ನಿರ್ದೇಶಿಸಲು ಕೇಂಬ್ರಿಜ್ ಅನಲಿಟಿಕಾ ಸಂಸ್ಥೆ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ವಿವರಗಳನ್ನು ಬಳಸಿಕೊಂಡಿತ್ತು ಎನ್ನುವ ಮಾಹಿತಿ ಬಹಿರಂಗಗೊಂಡ ಬೆನ್ನಲ್ಲೇ ಆಯೋಗ ಈ ನಿರ್ಧಾರಕ್ಕೆ ಬಂದಿದೆ.

2014ರ ಲೋಕಸಭಾ ಚುನಾವಣೆ ಸಹ ದತ್ತಾಂಶ ಸಂಗ್ರಹದಿಂದ ಪ್ರಭಾವಿತವಾಗಿತ್ತೇ ಎಂದು ಆಯೋಗ ಮುಂದಿನ ವಾರ ಚರ್ಚೆ ನಡೆಸಲಿದೆ. ಆದರೆ, ಮಾಹಿತಿ ಹಾಗೂ ತಜ್ಞರ ಅಭಿಪ್ರಾಯದ ಹೊರತಾಗಿ ಚುನಾವಣಾ ಆಯೋಗ ಇದನ್ನು ಖಾತ್ರಿಗೊಳಿಸಲು ಸಾಧ್ಯವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಮುಂದಿನ ಕಾರ್ಯವಿಧಾನ ನಿರ್ಣಯಿಸಲು ‘ವಾಸ್ತವ’ ವರದಿ ನೀಡುವಂತೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಕೋರಬಹುದು ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry