ವಿಶ್ವ ಬಾಕ್ಸಿಂಗ್ ಸರಣಿ: ಭರವಸೆಯಲ್ಲಿ ‘ಇಂಡಿಯನ್‌ ಟೈಗರ್ಸ್‌’ ಬಾಕ್ಸರ್‌ಗಳು

7
ಕಜಕಸ್ತಾನದ ಅಸ್ತಾನಾ ಅರ್ಲಾನ್ಸ್‌ ತಂಡದ ವಿರುದ್ಧ ಹಣಾಹಣಿ

ವಿಶ್ವ ಬಾಕ್ಸಿಂಗ್ ಸರಣಿ: ಭರವಸೆಯಲ್ಲಿ ‘ಇಂಡಿಯನ್‌ ಟೈಗರ್ಸ್‌’ ಬಾಕ್ಸರ್‌ಗಳು

Published:
Updated:

ನವದೆಹಲಿ: ‘ಇಂಡಿಯನ್‌ ಟೈಗರ್ಸ್‌’ ಫ್ರಾಂಚೈಸ್‌ನ ಬಾಕ್ಸರ್‌ಗಳು ಹರಿಯಾಣದ ರೋಹ್ಟಕ್‌ನಲ್ಲಿ ಶನಿವಾರ ನಡೆಯಲಿರುವ ವಿಶ್ವ ಬಾಕ್ಸಿಂಗ್ ಸರಣಿಯ ಸ್ಪರ್ಧೆಯಲ್ಲಿ ಭರವಸೆಯಿಂದ ಕಣಕ್ಕೆ ಇಳಿಯಲಿದ್ದಾರೆ.

ಕಜಕಸ್ತಾನದ ಅಸ್ತಾನಾ ಅರ್ಲಾನ್ಸ್ ತಂಡದ ವಿರುದ್ಧ ಈ ಸ್ಪರ್ಧೆ ನಡೆಯಲಿದ್ದು ತವರಿನ ಪ್ರೇಕ್ಷಕರ ಬೆಂಬಲದಲ್ಲಿ ಸೋಲಿನ ಸರಣಿಯಿಂದ ಹೊರಗೆ ಬರಲು ಪ್ರಯತ್ನಿಸಲಿದ್ದಾರೆ.

ಆತಿಥೇಯರು ರಷ್ಯಾದ ಪ್ಯಾಟ್ರಿ ಯಟ್ ಬಾಕ್ಸಿಂಗ್‌ ತಂಡದ ವಿರುದ್ಧದ ಮೊದಲ ಸ್ಪರ್ಧೆಯಲ್ಲಿ 1–4ರಿಂದ ಸೋತಿದ್ದರು. ನಂತರ ಅಸ್ತಾನಾ ಅರ್ಲಾನ್ಸ್‌ ತಂಡದ ಎದುರು ಕೂಡ ಇದೇ ಅಂತರದಲ್ಲಿ ಸೋತಿದ್ದರು.

ಈ ಎರಡು ಸ್ಪರ್ಧೆಗಳಲ್ಲಿ ಕ್ರಮವಾಗಿ ಕವಿಂದರ್ ಬಿಷ್ಟ್‌ (52 ಕೆಜಿ) ಮತ್ತು ಸಚಿನ್ ಸಿವಾಚ್‌ (49 ಕೆಜಿ) ಇಂಡಿಯನ್‌ ಟೈಗರ್ಸ್‌ನ ಗೌರವ ಉಳಿಸಿದ್ದರು. ಇಲ್ಲಿನ ರಾಷ್ಟ್ರೀಯ ಬಾಕ್ಸಿಂಗ್ ಅಕಾಡೆಮಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಶ್ಯಾಮ್‌ ಕುಮಾರ್ ಬಲಿಷ್ಠ ಟೆಮಿರ್ಟಾಸ್ ಜುಜುಪೊವ್‌ ಅವರನ್ನು ಎದುರಿಸುವರು.

ಕಿಂಗ್ಸ್‌ ಕಪ್‌ನಲ್ಲಿ ಶ್ಯಾಮ್‌ ಕುಮಾರ್‌ ಮೂರು ಬಾರಿ ಚಿನ್ನ ಗೆದ್ದಿದ್ದರು. ಇಂಡಿಯಾ ಓಪನ್‌ನಲ್ಲಿ ಚಿನ್ನ ಗೆದ್ದಿದ್ದ ಸಂಜೀತ್‌ ಕೂಡ ಇಂಡಿಯನ್‌ ಟೈಗ ರ್ಸ್‌ಗೆ ನಿರೀಕ್ಷೆ ಮೂಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry