ದೆಹಲಿ–ಟೆಲ್ ಅವಿವ್‌ ನೇರ ವಿಮಾನಯಾನ

7

ದೆಹಲಿ–ಟೆಲ್ ಅವಿವ್‌ ನೇರ ವಿಮಾನಯಾನ

Published:
Updated:
ದೆಹಲಿ–ಟೆಲ್ ಅವಿವ್‌ ನೇರ ವಿಮಾನಯಾನ

ಟೆಲ್ ಅವಿವ್: ನವದೆಹಲಿಯಿಂದ ಇಸ್ರೇಲ್‌ನ ಟೆಲ್‌ ಅವಿವ್‌ಗೆ ಇದೇ ಮೊದಲ ಬಾರಿಗೆ ನೇರ ವಿಮಾನಯಾನ ಆರಂಭವಾಗಿದ್ದು, ಏರ್‌ ಇಂಡಿಯಾ ಸಂಸ್ಥೆಯ ಎಐ 139 ವಿಮಾನ ಗುರುವಾರ ಇಲ್ಲಿನ ಬೆನ್ ಗ್ಯುರಿಯನ್ ವಿಮಾನನಿಲ್ದಾಣದಲ್ಲಿ ಬಂದಿಳಿಯಿತು.

‘ಇದೊಂದು ಐತಿಹಾಸಿಕ ಕ್ಷಣ. ನಾವೆಲ್ಲ ಹೊಸ ಕಾಲಘಟ್ಟದಲ್ಲಿ ಇದ್ದೇವೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಕ್ಕಾಗಿ ಇಸ್ರೇಲ್‌ಗೆ ಬರುವ ನಿರೀಕ್ಷೆ ಇದೆ. ಅದೇ ರೀತಿ ಇಲ್ಲಿನವರು ಹೆಚ್ಚಿನ ಸಂಖ್ಯೆಯಲ್ಲಿ ಭಾರತಕ್ಕೆ ತೆರಳುವ ವಿಶ್ವಾಸವಿದೆ. ಎರಡೂ ದೇಶಗಳ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ ಎಂದು ಇಸ್ರೇಲ್‌ ಪ್ರವಾಸೋದ್ಯಮ ಸಚಿವ ಯಾರಿವ್ ಲೆವಿನ್ ತಿಳಿಸಿದ್ದಾರೆ.

‘ಈ ಪ್ರಯಾಣದ ಅವಧಿ ಏಳು ತಾಸು 15 ನಿಮಿಷ. ನವದೆಹಲಿ–ಟೆಲ್‌ ಅವಿವ್‌ ನಡುವಿನ ಅತ್ಯಂತ ಸಮೀಪದ ಮಾರ್ಗ ಇದು’ ಎಂದು ಏರ್‌ ಇಂಡಿಯಾ ಅಧ್ಯಕ್ಷ ಪ್ರದೀಪ್ ಸಿಂಗ್‌ ಖರೋಲ ತಿಳಿಸಿದ್ದಾರೆ.

ಈ ವಿಮಾನ ಒಮನ್, ಸೌದಿ ಅರೇಬಿಯಾ ಮತ್ತು ಜೋರ್ಡನ್ ಮೂಲಕ ಟೆಲ್‌ ಅವಿವ್‌ಗೆ ಪ್ರಯಾಣಿಸಲಿದೆ. ತನ್ನ ವಾಯುಪ್ರದೇಶ ಬಳಸಿಕೊಳ್ಳಲು ಸೌದಿ ಅರೇಬಿಯಾ ಒಪ್ಪಿಗೆ ನೀಡಿರುವುದರಿಂದಾಗಿ ಪ್ರಯಾಣ ಅವಧಿಯ 2 ಗಂಟೆ 10 ನಿಮಿಷ ಉಳಿತಾಯವಾಗಲಿದೆ. ಪ್ರತಿ ಮಂಗಳವಾರ, ಗುರುವಾರ ಮತ್ತು ಭಾನುವಾರ ವಿಮಾನವು ಸಂಚರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry