ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಸಿಡಿಸ್‌ ಬೆಂಜ್‌ನ ಎಸ್‌ – ಶ್ರೇಣಿಯ ಕಾರು

Last Updated 23 ಮಾರ್ಚ್ 2018, 19:15 IST
ಅಕ್ಷರ ಗಾತ್ರ

ಬೆಂಗಳೂರು: ಟಿ. ವಿ. ಸುಂದರಂ ಅಯ್ಯಂಗಾರ್‌ ಆ್ಯಂಡ್‌ ಸನ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ಸುಂದರಂ ಮೋಟರ್ಸ್‌ನಲ್ಲಿ ಮರ್ಸಿಡಿಸ್ ಬೆಂಜ್‌ನ ಪ್ರಯಾಣಿಕ ವಾಹನಗಳಲ್ಲಿ ಅತ್ಯಂತ ಉನ್ನತ ಶ್ರೇಣಿಯ ‘ಎಸ್-ಕ್ಲಾಸ್‍’ನ ನವೀಕೃತ ಆವೃತ್ತಿಯನ್ನು ಅನಾವರಣ ಮಾಡಲಾಯಿತು.

ಸುಂದರಂ ಮೋಟರ್ಸ್‌, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮರ್ಸಿಡಿಸ್‌ ಬೆಂಜ್‌ನ ಪ್ರಯಾಣಿಕ ಕಾರುಗಳ ಅಧಿಕೃತ ಡೀಲರ್‌ ಆಗಿದೆ.

ಜರ್ಮನಿಯ ವಿಲಾಸಿ ಕಾರ್ ತಯಾರಿಕಾ ಸಂಸ್ಥೆ  ಮರ್ಸಿಡಿಸ್ ಬೆಂಜ್‌ನ, ಡೀಸೆಲ್ ಚಾಲಿತ ಹೊಸ ‘ಎಸ್-ಕ್ಲಾಸ್ 350 ಡಿ’, ಭಾರತಕ್ಕಾಗಿ ಭಾರತದಲ್ಲಿಯೇ ತಯಾರಿಸಿದ ಕಾರ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದು ವಾಯು ಮಾಲಿನ್ಯ ನಿಯಂತ್ರಣ ‘ಭಾರತ್‌ 6’ ಮಾನದಂಡ ಒಳಗೊಂಡಿರುವ ಮೊದಲ ಡೀಸೆಲ್‌ ಕಾರ್‌ ಆಗಿದೆ. ಈ ನಿಯಮ ಜಾರಿಗೆ ಬರುವ ಎರಡು ವರ್ಷಗಳ ಮೊದಲೇ ಈ ಕಾರ್‌ನಲ್ಲಿ ಈ ಮಾನದಂಡ ಅಳವಡಿಸಲಾಗಿದೆ. ಮಾಲಿನ್ಯ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಹೊಸ ತಂತ್ರಜ್ಞಾನವೂ ಇದರಲ್ಲಿದೆ. ದೇಶದಲ್ಲಿ ಮಾರಾಟವಾಗುವ ಮರ್ಸಿಡಿಸ್ ಬೆಂಜ್‌ನ ಕಾರುಗಳ ಪೈಕಿ ಅತ್ಯಂತ ಶಕ್ತಿಶಾಲಿ ಎಂಜಿನ್‌ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT