ಪಾಟೀಲ ಕಿಕ್‌ ಬ್ಯಾಕ್ ಪಡೆದಿರುವುದು ಸತ್ಯ

7

ಪಾಟೀಲ ಕಿಕ್‌ ಬ್ಯಾಕ್ ಪಡೆದಿರುವುದು ಸತ್ಯ

Published:
Updated:
ಪಾಟೀಲ ಕಿಕ್‌ ಬ್ಯಾಕ್ ಪಡೆದಿರುವುದು ಸತ್ಯ

ತುಮಕೂರು: ‘ವಿಶ್ವೇಶ್ವರಯ್ಯ ಜಲ ನಿಗಮದ ₹ 159 ಕೋಟಿ ಮೊತ್ತದ ಕಾಮಗಾರಿಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ₹ 25 ಕೋಟಿ ಕಿಕ್ ಬ್ಯಾಕ್ ಪಡೆದಿರುವುದು ಸತ್ಯ. ನಾನು ಕೊಟ್ಟಿರುವ ದಾಖಲೆಗಳಲ್ಲಿ ಸಣ್ಣಪುಟ್ಟ ದೋಷಗಳಿದ್ದರೂ ಅವರು ಹೇಳಿದಂತೆ ಕೇಳುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶುಕ್ರವಾರ ನಗರದಲ್ಲಿ ಬಿಜೆಪಿ ವತಿಯಿಂದ ನಡೆದ ರಾಜ್ಯ ಗೊಲ್ಲ (ಯಾದವ) ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

'ಕಮಿಷನ್ ಪಡೆದು ಕಾಮಗಾರಿಯನ್ನು ಹೊರ ರಾಜ್ಯದವರಿಗೆ ಗುತ್ತಿಗೆ ಕೊಡಲಾಗಿದೆ ಎಂದು ನಾನು ಆರೋಪಿಸಿದ ಮೇಲೆ ಈಗ ಅವರು ಗುತ್ತಿಗೆಯನ್ನು ಹಿಂದಕ್ಕೆ ಪಡೆದಿದ್ದೇವೆ ಎಂದು ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತಕ್ಕೆ ಹಿಡಿದ ಕನ್ನಡಿ' ಎಂದು ಆರೋಪಿಸಿದರು.

ಲಿಂಗಾಯತ ಧರ್ಮಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ತೀರ್ಮಾನವನ್ನು ಸಿದ್ಧಗಂಗಾಮಠದ ಕಿರಿಯ ಶ್ರೀಗಳು ಸ್ವಾಗತ ಮಾಡಿರುವ ಕುರಿತಂತೆ ನಾನೇನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry