ವಂಶಿ ಕೃಷ್ಣನ್‌ಗೆ ಇಂಗ್ಲಿಷ್ ಒಲಿಂಪಿಯಾಡ್ ಮುಡಿ

7

ವಂಶಿ ಕೃಷ್ಣನ್‌ಗೆ ಇಂಗ್ಲಿಷ್ ಒಲಿಂಪಿಯಾಡ್ ಮುಡಿ

Published:
Updated:

ಬೆಂಗಳೂರು: ಅಂತರರಾಷ್ಟ್ರೀಯ ಇಂಗ್ಲಿಷ್ ಒಲಿಂಪಿಯಾಡ್ ಸ್ಪರ್ಧೆಯಲ್ಲಿ ಸಿಎಂಆರ್ ನ್ಯಾಷನಲ್ ಪಬ್ಲಿಕ್ ಶಾಲೆಯ 4ನೇ ತರಗತಿ ವಿದ್ಯಾರ್ಥಿ ವಂಶಿ ಕೃಷ್ಣನ್ ಚಿನ್ನದ ಪದಕ ಪಡೆದಿದ್ದಾನೆ.

ಪದಕದ ಜತೆಗೆ ಪ್ರಮಾಣಪತ್ರ ಹಾಗೂ ₹50 ಸಾವಿರ ನಗದು ಬಹುಮಾನ ನೀಡಲಾಗಿದೆ. ಸೈನ್ಸ್ ಒಲಿಂಪಿಯಾಡ್ ಫೌಂಡೇಷನ್ (ಎಸ್‍ಒಎಫ್) ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ 30 ರಾಷ್ಟ್ರಗಳ 45,000 ಸ್ಪರ್ಧಿಗಳು ಭಾಗವಹಿಸಿದ್ದರು. ವಿಭಾಗೀಯ ಮಟ್ಟದ ಮೂರು ಹಂತಗಳಲ್ಲೂ ವಂಶಿ ಪ್ರಥಮ ಸ್ಥಾನ ಗಳಿಸಿದ್ದ.

ಅಂತರರಾಷ್ಟ್ರೀಯ ಜನರಲ್ ನಾಲೆಡ್ಜ್‌ ಸ್ಪರ್ಧೆಯಲ್ಲಿ ಆತ 29ನೇ ಸ್ಥಾನ ಪಡೆದಿದ್ದ. ಆ ಸ್ಪರ್ಧೆಯ ವಿಭಾಗೀಯ ಮಟ್ಟದ ಸ್ಪರ್ಧೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry