ಮಾಂಸದ ಅಂಗಡಿ ತೆರವಿಗೆ ಆಗ್ರಹ

7

ಮಾಂಸದ ಅಂಗಡಿ ತೆರವಿಗೆ ಆಗ್ರಹ

Published:
Updated:

ಬೆಂಗಳೂರು: ಚಿಕ್ಕಬಾಣಾವರದ ಬಸ್‌ ನಿಲ್ದಾಣದ ಬಳಿ ಅನಧಿಕೃತವಾಗಿ ನಡೆಸುತ್ತಿರುವ ಕೋಳಿ ಹಾಗೂ ಕುರಿ ಮಾಂಸದ ಅಂಗಡಿಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘ಈ ಅಂಗಡಿಗೆ ಗ್ರಾಮ ಪಂಚಾಯಿತಿ ಅನುಮತಿ ನೀಡಿಲ್ಲ. ಬಸ್‌ ನಿಲ್ದಾಣದ ಬಳಿ ಇರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಕೋಳಿ ತ್ಯಾಜ್ಯವನ್ನು ಸಮೀಪದ ಚರಂಡಿಗೆ ಎಸೆಯುತ್ತಿದ್ದಾರೆ. ಇದರಿಂದ ದುರ್ವಾಸನೆ ಬೀರುತ್ತಿದೆ’ ಎಂದು ಗ್ರಾಮದ ನಿವಾಸಿ ರಾಜಶೇಖರ್ ದೂರಿದರು.

‘ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಸಹಕಾರದಿಂದ ಈ ಅಂಗಡಿಯನ್ನು ನಡೆಸುತ್ತಿದ್ದಾರೆ. ಇದನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ಹರೀಶ್ ಒತ್ತಾಯಿಸಿದರು.

ಚಿಕ್ಕಬಾಣಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಕೇಶವಮೂರ್ತಿ, ‘ಮಾಲೀಕರಿಗೆ ಮೂರು ಬಾರಿ ನೋಟಿಸ್‌ ನೀಡಲಾಗಿದೆ. ಪೊಲೀಸರ ಸಹಾಯದಿಂದ ಶಾಪ್‌ ತೆರವುಗೊಳಿಸುತ್ತೇವೆ’ ಎಂದರು.

ಅಂಗಡಿ ಮಾಲೀಕ ಜಲಾಲುದ್ದೀನ್‌, ‘ಶಾಪ್‌ ಅನ್ನು ಶೀಘ್ರದಲ್ಲೇ ಮುಚ್ಚುತ್ತೇನೆ’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry