ನಾಲ್ಕನೇ ಮೇವು ಹಗರಣ: ಲಾಲು ಪ್ರಸಾದ್‌ಗೆ 7 ವರ್ಷ ಜೈಲು

7

ನಾಲ್ಕನೇ ಮೇವು ಹಗರಣ: ಲಾಲು ಪ್ರಸಾದ್‌ಗೆ 7 ವರ್ಷ ಜೈಲು

Published:
Updated:

ಪಟ್ನಾ: ನಾಲ್ಕನೇ ಮೇವು ಹಗರಣದಲ್ಲೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ದೋಷಿ ಎಂದು ಸಾಬೀತಾಗಿದ್ದು, 7 ವರ್ಷ ಸೆರೆವಾಸ ಶಿಕ್ಷೆ ವಿಧಿಸಲಾಗಿದೆ.

ಕಳೆದ ಕೆಲವು ದಿನಗಳ  ಹಿಂದೆ ಲಾಲು ಪ್ರಸಾದ್‌ ಅವರು ಮೇವು ಹಗರಣದ ನಾಲ್ಕನೇ ಪ್ರಕರಣದಲ್ಲಿಯೂ ತಪ್ಪಿತಸ್ಥ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು.

ದುಮಕಾ ಖಜಾನೆಯಿಂದ 1990ರ ದಶಕದ ಆರಂಭದಲ್ಲಿ ₹3.13 ಕೋಟಿಯನ್ನು ಅಕ್ರಮವಾಗಿ ಪಡೆದುಕೊಂಡ ಪ್ರಕರಣ ಇದು.

ಆರು ಪ್ರಕರಣಗಳು

ಮೊದಲ ಪ್ರಕರಣ: ಬಂಕಾ ಮತ್ತು ಭಾಗಲ್ಪುರ ಜಿಲ್ಲಾ ಖಜಾನೆಗಳಿಂದ ₹47 ಲಕ್ಷ ಮೊತ್ತವನ್ನು ಅಕ್ರಮವಾಗಿ ಪಡೆದುಕೊಂಡ ಪ್ರಕರಣ. ಲಾಲುಗೆ ಐದೂವರೆ ವರ್ಷ ಜೈಲು ಶಿಕ್ಷೆಯ ತೀರ್ಪು 2013ರಲ್ಲಿ ಪ್ರಕಟವಾಯಿತು. ಈ ಪ್ರಕರಣದಿಂದಾಗಿ ಲಾಲು ಅವರು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡರು. ಶಿಕ್ಷೆ ಪೂರ್ಣಗೊಳಿಸಿದ ನಂತರದ ಆರು ವರ್ಷ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ

ಎರಡನೇ ಪ್ರಕರಣ: ದೇವಗಡ ಖಜಾನೆಯಿಂದ ₹89 ಲಕ್ಷ ಪಡೆದ ಪ್ರಕರಣದಲ್ಲಿ ಲಾಲೂ ತಪ್ಪಿತಸ್ಥ. 2017ರ ಡಿಸೆಂಬರ್‌ 23ರಂದು ಮೂರೂವರೆ ವರ್ಷ ಶಿಕ್ಷೆ ಪ್ರಕಟ

ಮೂರನೇ ಪ್ರಕರಣ: ಚಾಯಿಬಾಸಾ ಖಜಾನೆಯಿಂದ ₹37.62 ಕೋಟಿಯನ್ನು ಅಕ್ರಮವಾಗಿ ಬಳಸಿಕೊಂಡ ಪ್ರಕರಣದಲ್ಲಿ ಇದೇ ಜನವರಿ 25ರಂದು ಐದು ವರ್ಷ ಸೆರೆವಾಸದ ಶಿಕ್ಷೆ

ಐದನೇ ಪ್ರಕರಣ: ರಾಂಚಿಯ ದೊರಾಂಡಾ ಖಜಾನೆಯಿಂದ ₹139 ಕೋಟಿ ಮೊತ್ತವನ್ನು ಅಕ್ರಮವಾಗಿ ಪಡೆದುಕೊಂಡ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದೆ

ಆರನೇ ಪ್ರಕರಣ: ಭಾಗಲ್ಪುರ ಖಜಾನೆಯಿಂದ ಹಣವನ್ನು ಅಕ್ರಮವಾಗಿ ಪಡೆದುಕೊಂಡ ಪ್ರಕರಣದ ವಿಚಾರಣೆ ಬಿಹಾರದಲ್ಲಿ ನಡೆಯುತ್ತಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry