ಅತಿಕ್ರಮಣದಾರರಿಗೆ ಪಟ್ಟಾ ನೀಡಲು ಆಗ್ರಹ

7

ಅತಿಕ್ರಮಣದಾರರಿಗೆ ಪಟ್ಟಾ ನೀಡಲು ಆಗ್ರಹ

Published:
Updated:

ಹೊನ್ನಾವರ: ‘ಅತಿಕ್ರಮಣ ಅರಣ್ಯ ಭೂಮಿಯ ಹಕ್ಕನ್ನು ಅತಿಕ್ರಮಣದಾರ ರೈತರಿಗೆ ನೀಡಬೇಕು’ ಎಂದು ಒತ್ತಾಯಿಸಿ ಇಲ್ಲಿನ ಅರಣ್ಯ ಭೂಮಿ ಸಾಗುವಳಿದಾರರ ತಾಲ್ಲೂಕು ಹೋರಾಟ ಸಮಿತಿಯ ಸದಸ್ಯರು ಶುಕ್ರವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

‘ಹಲವಾರು ವರ್ಷಗಳಿಂದ ರೈತರು ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಅದನ್ನು ಪರಿಗಣಿಸಿ ಅವರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಅವ ರಿಗೇ ಮಂಜೂರಿ ಮಾಡಬೇಕು’ ಎಂದರು. ಅರಣ್ಯ ಭೂಮಿ ಸಾಗುವಳಿದಾರರ ತಾಲ್ಲೂಕು ಹೋರಾಟ ಸಮಿತಿಯ ಚಂದ್ರಕಾಂತ ಕೊಚರೇಕರ್, ತಾಲ್ಲೂಕು ಪಂಚಾಯ್ತಿ ಸದಸ್ಯ ಲೋಕೇಶ ನಾಯ್ಕ, ಕರ್ನಾಟಕ ಪ್ರಾಂತ ರೈತ ಸಂಘದ ತಿಮ್ಮಪ್ಪ ಗೌಡ, ಹೆರಂಗಡಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಲೋಕೇಶ ನಾಯ್ಕ, ಉಪ್ಪೋಣಿ ಗ್ರಾಮ ಪಂಚಾಯ್ತಿ ಸದಸ್ಯ ಗಣೇಶ ನಾಯ್ಕ, ನಾರಾಯಣ ಮರಾಠಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry