ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಜೆಯಲ್ಲಿ ಕಾಲಹರಣ ಮಾಡಬೇಡಿ’

Last Updated 24 ಮಾರ್ಚ್ 2018, 11:29 IST
ಅಕ್ಷರ ಗಾತ್ರ

ಕಾರಟಗಿ: ಒಂಬತ್ತನೇ ತರಗತಿ ವಿದ್ಯಾರ್ಥಿಗಳು ರಜೆಯಲ್ಲಿ ಕಾಲಹರಣ ಮಾಡದೆ ಎಸ್ಸೆಸ್ಸೆಲ್ಸಿಗಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶರಣಬಸವೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ. ಜಿ. ಅರಳಿ ಹೇಳಿದರು.

ಬುಧವಾರ ಮಾತನಾಡಿದ ಅವರು, ಶ್ರೀಗುರು ಚನ್ನಬಸವಸ್ವಾಮಿ ಉಚಿತ ತರಬೇತಿ ಕೇಂದ್ರದ ಬೇಸಿಗೆ ಶಿಬಿರದಲ್ಲಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌, ವಿಜ್ಞಾನ, ಗಣಿತ ವಿಷಯಗಳ ತರಬೇತಿ ನೀಡಲಿದ್ದು, ವಿದ್ಯಾರ್ಥಿಗಳು ಶಿಬಿರದ ಲಾಭ ಪಡೆಯಬೇಕು ಎಂದರು.

ಪುರಸಭೆಯ ಎಸ್‌ಎಫ್‌ಸಿ ಯೋಜನೆ ಅಡಿ ಐವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಶಿಕ್ಷಣ ಪ್ರೇಮಿಗಳಾದ ಪಂಪಾಪತಿ ಹುರಕಡ್ಲಿ, ಸಿದ್ದಲಿಂಗೇಶ್ವರ ಪೂಲಬಾವಿ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟ ಗುರಿ ಇಟ್ಟುಕೊಂಡು ಅಭ್ಯಾಸ ನಡೆಸಬೇಕು ಎಂದು ಅವರು ಹೇಳಿದದರು.

ಪ್ರಮುಖರಾದ ಭೋಗೇಶ್ವರರಾವ್, ಶರಣಪ್ಪ ಬೂದಗುಂಪಾ, ಮುಖ್ಯಗುರುಗಳಾದ ವೀರೇಶ ಮ್ಯಾಗೇರಿ, ಮಹಾಂತೇಶ ಗದ್ದಿ, ರೂಪಾ, ಅಮರೇಶ ಪಾಟೀಲ, ಶಿಕ್ಷಕರಾದ ಜಗದೀಶ ಹಳ್ಳೂರ, ಜೆ. ವಿ. ಭಜಂತ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT