ಬಜರಂಗದಳದ ಮುಖಂಡನ ಕೊಲೆ ಆರೋಪ: ಮೂವರು ಖುಲಾಸೆ

7

ಬಜರಂಗದಳದ ಮುಖಂಡನ ಕೊಲೆ ಆರೋಪ: ಮೂವರು ಖುಲಾಸೆ

Published:
Updated:
ಬಜರಂಗದಳದ ಮುಖಂಡನ ಕೊಲೆ ಆರೋಪ: ಮೂವರು ಖುಲಾಸೆ

ಮಂಗಳೂರು: ಬಜರಂಗದಳದ ಮುಖಂಡ ರಾಜೇಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಲ್ಲೂರಿನ ಮೂವರು ಯುವಕರನ್ನು ಖುಲಾಸೆಗೊಳಿಸಿ ನಗರದ  ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಮಲ್ಲೂರಿನ ಇರ್ಷಾದ್, ಇಮ್ರಾನ್ ಮತ್ತು ಹುಸೇನ್ ಖುಲಾಸೆಗೊಂಡವರು.

ಬಂಟ್ವಾಳ ತಾಲ್ಲೂಕಿನ ಬೆಂಜನಪದವು ಬಳಿ 2014ರ ಮಾರ್ಚ್ 21ರಂದು ರಾಜೇಶ್ ಪೂಜಾರಿಯನ್ನು ಹತ್ಯೆ ಮಾಡಲಾಗಿತ್ತು.

ರಾಜೇಶ್ ಪೂಜಾರಿ ಬಂಟ್ವಾಳ ತಾಲ್ಲೂಕಿನ ಇಕ್ಬಾಲ್ ಎಂಬ ಯುವಕನ ಕೊಲೆ ಪ್ರಕರಣದ ಆರೋಪಿಯಾಗಿದ್ದ. 2014ರ ಮಾರ್ಚ್ 21ರ ಬೆಳಿಗ್ಗೆ ಈತನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಲಾಗಿತ್ತು.

ಹಲವು ದಿನಗಳಾದರೂ ಆರೋಪಿಗಳನ್ನು ಬಂಧಿಸಿರಲಿಲ್ಲ. ನಂತರ ಈ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದರು. ಆದರೆ ಯುವಕರು ಮತ್ತು ಅವರ ಕುಟುಂಬದ ಸದಸ್ಯರು ಆರೋಪ ನಿರಾಕರಿಸಿದ್ದರು. ಸುಳ್ಳು ಆರೋಪ ಮಾಡಲಾಗಿದೆ ಎಂದು ಡಿವೈಎಫ್ಐ ನೇತೃತ್ವದಲ್ಲಿ ಹೋರಾಟವೂ ನಡೆದಿತ್ತು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರು ಶನಿವಾರ ಅಂತಿಮ ಆದೇಶ ಹೊರಡಿಸಿದರು. ಮೂವರನ್ನೂ ಖುಲಾಸೆಗೊಳಿಸಿದ ನ್ಯಾಯಾಧೀಶರು, ಪ್ರಾಸಿಕ್ಯೂಷನ್ ಆರೋಪಿಗಳ ವಿರುದ್ಧದ ಆರೋಪ ಸಾಬೀತು ಮಾಡುವಲ್ಲಿ ವಿಫಲವಾಗಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry