ಕೇವಲ 20 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ಬರೆದ ವೃದ್ಧಿಮಾನ್ ಸಹಾ

7

ಕೇವಲ 20 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ಬರೆದ ವೃದ್ಧಿಮಾನ್ ಸಹಾ

Published:
Updated:
ಕೇವಲ 20 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ಬರೆದ ವೃದ್ಧಿಮಾನ್ ಸಹಾ

ಕೋಲ್ಕತ್ತ: ಕೇವಲ 20 ಎಸೆತಗಳಲ್ಲಿ ಶತಕ ಗಳಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ವೃದ್ಧಿಮಾನ್ ಸಹಾ ದಾಖಲೆ ನಿರ್ಮಿಸಿದ್ದಾರೆ.

ಶನಿವಾರ ಇಲ್ಲಿ ನಡೆದ ಜೆ.ಸಿ.ಮುಖರ್ಜಿ ಟ್ರೋಫಿ ಟ್ವೆಂಟಿ–20 ಅಂತರ ಕ್ಲಬ್‌ ಕ್ರಿಕೆಟ್ ಟೂರ್ನಿಯಲ್ಲಿ ಬೆಂಗಾಲ್ ನಾಗಪುರ್ ರೈಲ್ವೆಸ್ ತಂಡದ ಎದುರಿನ ಪಂದ್ಯದಲ್ಲಿ ಮೋಹನ್‌ ಬಗಾನ್‌ ತಂಡದ ಪರ ಆಡಿದ ಸಹಾ 14 ಸಿಕ್ಸರ್‌ ಮತ್ತು ನಾಲ್ಕು ಬೌಂಡರಿ ಸಿಡಿಸಿ 102 ರನ್‌ ಗಳಿಸಿದರು.

ನಂತರ 152 ರನ್‌ಗಳ ಗುರಿ ಬೆನ್ನತ್ತಿದ ಮೋಹನ್‌ ಬಗಾನ್‌ ತಂಡ ವೃದ್ಧಿಮಾನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 7 ಓವರ್‌ಗಳಲ್ಲಿ ಜಯಿಸಿತು.

ನಾಯಕ ಶುಭಮಯ್‌ ದಾಸ್ (43; 22 ಎ, 2 ಸಿ, 6 ಬೌಂ) ಅವರೊಂದಿಗೆ ಬ್ಯಾಟಿಂಗ್ ಆರಂಭಿಸಿದ ಸಹಾ ಏಳನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಶತಕ ಪೂರೈಸಿದರು. ಅವರ ಇನಿಂಗ್ಸ್‌ನಲ್ಲಿ ಕೇವಲ ಎರಡು ಒಂಟಿ ರನ್‌ಗಳಿದ್ದವು.  ನಾಲ್ಕು ಸಿಕ್ಸರ್‌ ಮತ್ತು ಬೌಂಡರಿಗಳೊಂದಿಗೆ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry