ಕ್ಷಮೆಯಾಚಿಸಿದ ಗೋವಾ ಸಚಿವ

7

ಕ್ಷಮೆಯಾಚಿಸಿದ ಗೋವಾ ಸಚಿವ

Published:
Updated:

ಪಣಜಿ: ಮಹದಾಯಿ ನ್ಯಾಯಮಂಡಳಿ ಗೋವಾ ರಾಜ್ಯದ ಪರ ಮೃದುಧೋರಣೆ ಹೊಂದಿದೆ ಎಂದು ಹೇಳಿಕೆ ನೀಡಿದ ಗೋವಾ ಜಲಸಂಪನ್ಮೂಲ ಖಾತೆ ಸಚಿವ ವಿನೋದ್‌ ಪಾಲ್ಯೇಕರ್‌ ಶನಿವಾರ  ಕ್ಷಮೆಯಾಚಿಸಿದ್ದಾರೆ.

‘ಇದು ನನ್ನಿಂದ ಆಗಿರುವ ಪ್ರಮಾದ. ನ್ಯಾಯಾಂಗಕ್ಕಾಗಲಿ, ನ್ಯಾಯಾಧೀಶರಿಗಾಗಲಿ ಅಗೌರವ ತೋರಬೇಕು ಎನ್ನುವ ಉದ್ದೇಶ ನನ್ನದಾಗಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

ಮಹದಾಯಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಗೋವಾ ರಾಜ್ಯದ ವಾದಗಳನ್ನು ನ್ಯಾಯಮಂಡಳಿ ಆಲಿಸುತ್ತಿದ್ದು, ವಿಚಾರಣೆ ಅಂತಿಮ ಹಂತದಲ್ಲಿದೆ.

ವಿಶ್ವ ಜಲ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ‘ನ್ಯಾಯಮಂಡಳಿಯ ನ್ಯಾಯಾಧೀಶರು ಗೋವಾ ಪರವಾಗಿದ್ದಾರೆ ಹಾಗಾಗಿ ದೇವರು ನಮಗೆ ಜಯ ದಯಪಾಲಿಸಲಿದ್ದಾನೆ’ ಎಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry