ಕಾವೇರಿ ವಿಚಾರ ‘ಡಿಎಂಕೆಯಿಂದ ತಪ್ಪು ಮಾಹಿತಿ’

7

ಕಾವೇರಿ ವಿಚಾರ ‘ಡಿಎಂಕೆಯಿಂದ ತಪ್ಪು ಮಾಹಿತಿ’

Published:
Updated:

ಚೆನ್ನೈ: ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡಿನ ಜನರಿಗೆ ಡಿಎಂಕೆ ಪಕ್ಷವು ತಪ್ಪು ದಾರಿಗೆಳೆಯುತ್ತಿದೆ ಎಂದು ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಆರೋಪಿಸಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ಅಂತರರಾಜ್ಯ ನದಿ ವಿವಾದದಲ್ಲಿ ರಾಜ್ಯದ ಜನತೆಗೆ ಒಳಿತಾಗುವಂತೆ ಬಿಜೆಪಿ ಹೆಜ್ಜೆಯಿಡಲಿದೆ’ ಎಂದು ತಿಳಿಸಿದರು.

‘ರಾಜ್ಯದ ಪಾಲಿನ ನೀರನ್ನು ಏಕೆ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ತಮಿಳುನಾಡು ಕಾಂಗ್ರೆಸ್ ಘಟಕವು ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಬೇಕು’ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry