ರಾಜ್ಯದ ಮೊದಲ 4ಜಿ ಮೊಬೈಲ್‌ ಟವರ್‌ ಆರಂಭ

7

ರಾಜ್ಯದ ಮೊದಲ 4ಜಿ ಮೊಬೈಲ್‌ ಟವರ್‌ ಆರಂಭ

Published:
Updated:
ರಾಜ್ಯದ ಮೊದಲ 4ಜಿ ಮೊಬೈಲ್‌ ಟವರ್‌ ಆರಂಭ

ಶಿವಮೊಗ್ಗ: ‘ರಾಜ್ಯದ ಆಯ್ದ 540 ಸ್ಥಳಗಳಲ್ಲಿ ಶೀಘ್ರದಲ್ಲೇ 4ಜಿ ಮೊಬೈಲ್ ಟವರ್‌ ಸ್ಥಾಪಿಸಲು ಚಾಲನೆ ನೀಡಲಾಗಿದೆ’ ಎಂದು ದೂರ ಸಂಪರ್ಕ ಖಾತೆ ರಾಜ್ಯ ಸಚಿವ ಮನೋಜ್‌ ಸಿನ್ಹಾ ಮಾಹಿತಿ ನೀಡಿದರು.

ಶಿವಮೊಗ್ಗದಲ್ಲಿ ಸ್ಥಾಪಿಸಿರುವ ರಾಜ್ಯದ ಮೊದಲ ಬಿಎಸ್‌ಎನ್‌ಎಲ್‌ 4 ಜಿ ಮೊಬೈಲ್ ಟವರ್‌ಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘2014ರಿಂದ ಈಚೆಗೆ ದೇಶದ ಪ್ರಗತಿಯ ಗತಿ ಬದಲಾಗಿದೆ. ಡಿಜಿಟಲ್ ಇಂಡಿಯಾ ಪರಿಕಲ್ಪನೆ ಜನಪ್ರಿಯವಾಗಿದೆ. ಕೇಂದ್ರ ಸರ್ಕಾರ ಅಧುನಿಕ ತಂತ್ರಜ್ಞಾನ ಒಳಗೊಂಡ ದೂರ ಸಂಪರ್ಕ ಕ್ರಾಂತಿಗೆ ಒತ್ತು ನೀಡಿದ ಪರಿಣಾಮ ವಿಶ್ವದ ಮುಂದುವರಿದ ರಾಷ್ಟ್ರಗಳಾದ ಅಮೆರಿಕ, ಚೀನಾದಲ್ಲಿ ಬಳಸುವ ಗುಣಮಟ್ಟದ ಮೊಬೈಲ್ ಸೇವೆ ಭಾರತೀಯರು ಬಳಸಲು ಸಾಧ್ಯವಾಗಿದೆ‘ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry