‘ಇಂಡಿಯನ್ ಟೈಗರ್ಸ್‌’ಗೆ ಸೋಲು

7

‘ಇಂಡಿಯನ್ ಟೈಗರ್ಸ್‌’ಗೆ ಸೋಲು

Published:
Updated:

ರೋಹ್ಟಕ್‌, ಹರಿಯಾಣ: ಪ್ರಬಲ ‍ಪ್ರತಿಸ್ಪರ್ಧೆ ಒಡ್ಡಿದರೂ ಕಜಕಸ್ತಾನದ ಅರ್ತಾನ ಅರ್ಲಾನ್‌ಗೆ ಮಣಿದ ಭಾರತದ ‘ಇಂಡಿಯನ್ ಟೈಗರ್ಸ್‌’ ತಂಡದವರು ವಿಶ್ವ ಬಾಕ್ಸಿಂಗ್ ಸರಣಿಯಲ್ಲಿ ನಿರಾಸೆ ಅನುಭವಿಸಿದರು.

ಇಲ್ಲಿನ ರಾಷ್ಟ್ರೀಯ ಬಾಕ್ಸಿಂಗ್ ಅಕಾಡೆಮಿಯಲ್ಲಿ ಶನಿವಾರ ರಾತ್ರಿ ನಡೆದ ಸ್ಪರ್ಧೆಗಳಲ್ಲಿ ‘ಇಂಡಿಯನ್ ಟೈಗರ್ಸ್‌’ 2–3ರಿಂದ ಸೋತಿತು.

ಫಲಿತಾಂಶಗಳು: 46ರಿಂದ 49 ಕೆಜಿ ವಿಭಾಗ: ಭಾರತದ ಶ್ಯಾಮ್‌ ಕುಮಾರ್‌ಗೆ ಟೆಮಿರ್ಟಾಸ್‌ ಜುಸುಪೊವ್‌ ವಿರುದ್ಧ ಸೋಲು;56 ಕೆಜಿ: ಭಾರತದ ಮಹಮ್ಮದ್ ಎತಾಶ್ ಖಾನ್‌ಗೆ ನೂರ್ ಸುಲ್ತಾನ್‌ ಕೊಶ್ಚೆಗುಲೊವ್ ವಿರುದ್ಧ ಜಯ; 54 ಕೆಜಿ: ಭಾರತದ ಧೀರಜ್‌ಗೆ ದಿಲ್‌ಮುರಾತ್ ಮಿಜಿಟೊವ್‌ ವಿರುದ್ಧ ಸೋಲು; 75 ಕೆಜಿ: ಭಾರತದ ಆಶಿಶ್‌ ಕುಮಾರ್‌ಗೆ ಅಬಿಲ್‌ಖಾನ್‌ ಅಮನ್‌ಕುಲ್‌ ವಿರುದ್ಧ ಸೋಲು; 91 ಕೆಜಿ: ಭಾರತದ ಸಂಜೀತ್‌ಗೆ ಅಬಿಲ್‌ಖೈರ್‌ ತುರ್ಲಾನ್‌ಬೆಕೊವ್‌ ಎದುರು ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry