ಪಂಕಜ್‌ಗೆ ಏಷ್ಯನ್‌ ಬಿಲಿಯರ್ಡ್ಸ್ ಕಿರೀಟ

7

ಪಂಕಜ್‌ಗೆ ಏಷ್ಯನ್‌ ಬಿಲಿಯರ್ಡ್ಸ್ ಕಿರೀಟ

Published:
Updated:
ಪಂಕಜ್‌ಗೆ ಏಷ್ಯನ್‌ ಬಿಲಿಯರ್ಡ್ಸ್ ಕಿರೀಟ

ಯಾಂಗೂನ್‌: ಭಾರತದ ಪಂಕಜ್ ಅಡ್ವಾಣಿ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಹೋದ ವರ್ಷ ಇಲ್ಲಿ ಚಾಂಪಿಯನ್ ಆಗಿದ್ದ ಪಂಕಜ್‌ ಪ್ರಶಸ್ತಿ ಉಳಿಸಿಕೊಳ್ಳು ವಲ್ಲಿ ಸಫಲರಾಗಿದ್ದಾರೆ. ಅಂತಿಮ ಸುತ್ತಿನ ಪೈಪೋಟಿಯಲ್ಲಿ ಅವರು 6–1 ಫ್ರೇಮ್‌ಗಳಲ್ಲಿ ಭಾರತದವರೇ ಆದ ಬಿ.ಭಾಸ್ಕರ್ ಎದುರು ಗೆದ್ದಿದ್ದಾರೆ. 24–100, 102–6, 101–59, 100–0, 101–0, 102–40, 101–51ರಲ್ಲಿ ಪೈಪೋಟಿ ನಡೆಸಿದರು.

ಬಿಲಿಯರ್ಡ್ಸ್ ವಿಭಾಗದಲ್ಲಿ ಪಂಕಜ್ ಅವರ ಅಧಿಪತ್ಯ ಮುಂದುವರಿದಿದೆ. ಏಷ್ಯಾ ಮಟ್ಟದಲ್ಲಿ ಅವರು ಗೆದ್ದ 11ನೇ ಪ್ರಶಸ್ತಿ ಇದಾಗಿದೆ. ಮೊದಲ ಫ್ರೇಮ್‌ನಲ್ಲಿಯೇ ಸೋತ ಪಂಕಜ್ ಎರಡನೇ ಫ್ರೇಮ್‌ನಲ್ಲಿ ತಿರುಗೇಟು ನೀಡಿದರು. ಉಳಿದ ಎಲ್ಲಾ ಫ್ರೇಮ್‌ ಗಳಲ್ಲಿಯೂ ಎದುರಾಳಿಗೆ ಹೆಚ್ಚು ಪಾಯಿಂಟ್ಸ್‌ ಕಲೆಹಾಕಲು ಅವಕಾಶ ನೀಡಲಿಲ್ಲ. ನಾಲ್ಕು ಹಾಗೂ ಐದನೇ ಫ್ರೇಮ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದರು.

ಅಮೀ ಕಮಾನಿ ಚಾಂಪಿಯನ್‌: ಮಹಿಳೆಯರ ಸ್ನೂಕರ್ ವಿಭಾಗದಲ್ಲಿ ಭಾರತದ ಅಮೀ ಕಮಾನಿ ಪ್ರಶಸ್ತಿ ಗೆದ್ದಿದ್ದಾರೆ. ಫೈನಲ್‌ನಲ್ಲಿ ಅವರು 3–0 ಫ್ರೇಮ್‌ಗಳಲ್ಲಿ ಥಾಯ್ಲೆಂಡ್‌ನ ಸಿರಿಪೊಪರ್ನ್‌ ವಿರುದ್ಧ ಜಯದಾಖಲಿಸಿದರು. 49–11, 83–46, 72–24ರಲ್ಲಿ ಪೈಪೋಟಿ ನಡೆಸಿ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry