ಕುಲದೀಪ್ ಮೇಲೆ ಒತ್ತಡ: ಪೀಯೂಷ್‌ ಚಾವ್ಲಾ

7

ಕುಲದೀಪ್ ಮೇಲೆ ಒತ್ತಡ: ಪೀಯೂಷ್‌ ಚಾವ್ಲಾ

Published:
Updated:
ಕುಲದೀಪ್ ಮೇಲೆ ಒತ್ತಡ: ಪೀಯೂಷ್‌ ಚಾವ್ಲಾ

ಕೋಲ್ಕತ್ತ: ಎಡಗೈ ಸ್ಪಿನ್ನರ್‌ ಕುಲದೀಪ್ ಯಾದವ್ ಮೇಲೆ ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚು ಒತ್ತಡ ಉಂಟಾಗಲಿದೆ ಎಂದು ಕೋಲ್ಕತ್ತ ನೈಟ್ ರೈಡರ್ಸ್‌ನಲ್ಲಿ ಅವರೊಂದಿಗೆ ಆಡಲಿರುವ ಸ್ಪಿನ್ನರ್ ಪೀಯೂಷ್‌ ಚಾವ್ಲಾ ಅಭಿಪ್ರಾಯಪಟ್ಟರು.

ಕೋಲ್ಕತ್ತ ನೈಟ್ ರೈಡರ್ಸ್‌ ಪರ ನಾಲ್ಕನೇ ಬಾರಿ ಐಪಿಎಲ್‌ ಆಡುತ್ತಿರುವ ಕುಲದೀಪ್‌ ಈ ವರ್ಷ ಭಾರತ ಕ್ರಿಕೆಟ್ ತಂಡದಲ್ಲಿ ಮಿಂಚು ಹರಿಸಿದ್ದಾರೆ. ಹೀಗಾಗಿ ಅವರ ಮೇಲೆ ಸಹಜವಾದ ಒತ್ತಡ ಇರಲಿದೆ ಎಂಬುದು ಚಾವ್ಲಾ ಲೆಕ್ಕಾಚಾರ.

‘ಭಾರತ ತಂಡದಲ್ಲಿ ಅವರು ಮಾಡುತ್ತಿರುವ ಸಾಧನೆ ಗಮನಾರ್ಹ. ದೇಶಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ರೀತಿಯ ಸಾಮರ್ಥ್ಯ ತೋರುತ್ತಿರುವ ಅವರು ಈಗ ಐಪಿಎಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಒತ್ತಡದಲ್ಲಿದ್ದಾರೆ’ ಎಂದು ಚಾವ್ಲಾ ಹೇಳಿದರು.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಟ್ಟು 17 ವಿಕೆಟ್ ಕಬಳಿಸಿ ಹರಿಣಗಳ ನಾಡಿನಲ್ಲಿ ಸರಣಿಯೊಂದರಲ್ಲಿ ಅತಿಹೆಚ್ಚು ವಿಕೆಟ್ ಉರುಳಿಸಿದ ಬೌಲರ್ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದರು. 1998ರಲ್ಲಿ ಮುತ್ತಯ್ಯ ಮುರಳೀಧರ (14 ವಿಕೆಟ್‌) ನಿರ್ಮಿಸಿದ್ದ ದಾಖಲೆಯನ್ನು ಅವರು ಮುರಿದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry