ಆರ್‌ಸಿಬಿ: ಕಾಲ್ಟರ್‌ನೈಲ್‌ ಬದಲಿಗೆ ಆ್ಯಂಡರ್ಸನ್‌

7

ಆರ್‌ಸಿಬಿ: ಕಾಲ್ಟರ್‌ನೈಲ್‌ ಬದಲಿಗೆ ಆ್ಯಂಡರ್ಸನ್‌

Published:
Updated:
ಆರ್‌ಸಿಬಿ: ಕಾಲ್ಟರ್‌ನೈಲ್‌ ಬದಲಿಗೆ ಆ್ಯಂಡರ್ಸನ್‌

ನವದೆಹಲಿ: ಗಾಯಾಳು ನೆಥಾನ್‌ ಕಾಲ್ಟರ್‌ನೈಲ್ ಬದಲಿಗೆ ನ್ಯೂಜಿಲೆಂಡ್‌ನ ಆಲ್‌ರೌಂಡರ್‌ ಕೋರಿ ಆ್ಯಂಡರ್ಸನ್‌ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ಆಡಲಿದ್ದಾರೆ. ಐಪಿಎಲ್ ತಾಂತ್ರಿಕ ಸಮಿತಿ ಇದನ್ನು ದೃಢಪಡಿಸಿದೆ.

ಕಳೆದ ಆವೃತ್ತಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ಆಡಿದ್ದ ಕಾಲ್ಟರ್‌ನೈಲ್‌ ಎಂಟು ‍ಪಂದ್ಯಗಳಿಂದ 15 ವಿಕೆಟ್‌ ಕಬಳಿಸಿದ್ದರು. ಈ ಬಾರಿ ಅವರನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಖರೀದಿಸಿತ್ತು. ಆದರೆ ಇತ್ತೀಚೆಗೆ ಗಾಯಗೊಂಡಿದ್ದರು.

ನೋಂದಾಯಿಸಿಕೊಂಡ ಆಟಗಾರರನ್ನು ಬಳಸಿಕೊಳ್ಳುವ ನಿಯಮದಡಿ ಆ್ಯಂಡರ್ಸನ್‌ ಅವರನ್ನು ಅವರ ಮೂಲಬೆಲೆ ₹ 2 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

‘ಕೌಲ್ಟರ್‌ನೈಲ್ ಅವರ ಗಾಯ ತೀವ್ರವಾಗಿದ್ದು ವಿಶ್ರಾಂತಿ ಬೇಕಾಗಿದೆ. ಅವರ ಗೈರು ತಂಡಕ್ಕೆ ಭಾರಿ ನಷ್ಟ. ಅವರು ಬೇಗನೆ ಗುಣಮುಖರಾಗಲಿ ಎಂಬುದು ನಮ್ಮ ಹಾರೈಕೆ’ ಎಂದು ಪ್ರಕಟಣೆಯಲ್ಲಿ ಆರ್‌ಸಿಬಿ ‍‍ಆಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry