ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಸುದ್ದಿಗಳು

Last Updated 24 ಮಾರ್ಚ್ 2018, 18:48 IST
ಅಕ್ಷರ ಗಾತ್ರ

ವಿಚಾರ ಸಂಕಿರಣ

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ‘ಜಾಗತಿಕ ಚಿಂತನೆಗಳಿಗೆ ಆನಂದಮೂರ್ತಿಯವರ ಕೊಡುಗೆ’ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಕನ್ನಡ ಅಧ್ಯಯನ ಕೇಂದ್ರದ ಜಿಎಸ್‌ಎಸ್‌ ಸಭಾಂಗಣದಲ್ಲಿ ನಡೆಯಲಿದೆ.

ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಐ.ಎ. ಶಿವಕುಮಾರ ವಿಚಾರಸಂಕಿರಣ ಉದ್ಘಾಟಿಸಲಿದ್ದು, ಕುಲಸಚಿವ ಪ್ರೊ.ಬಿ.ಕೆ. ರವಿ ಹಾಗೂ ಸಿಂಡಿಕೇಟ್‌ ಸದಸ್ಯ ಎನ್‌. ವಿಜಯಕುಮಾರ್‌ ಸಿಂಹ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸಂಪ್ರದಾಯ ಗೀತೆ ಶಿಬಿರ

ಗಾಯಕಿ ಮನೋನ್‌ಮಣಿ ಅವರು ಸಂಪ್ರದಾಯ ಗೀತೆ ಶಿಬಿರವನ್ನು ಇದೇ 28ರಂದು ಬೆಳಿಗ್ಗೆ 11 ರಿಂದ ಸಂಜೆ 4ರ ವರೆಗೆ ನಗರದಲ್ಲಿ ಆಯೋಜಿಸಿದ್ದಾರೆ. ಆಸಕ್ತರು ಶಿಬಿರದಲ್ಲಿ ಪಾಲ್ಗೊಂಡು ಸಂಗೀತ ಕಲಿಯಬಹುದು.

ಸ್ಥಳ: ಡಾ.ಸಾವಿತ್ರಿ ಅವರ ಮನೆ, ನಂಬರ್ 6, ಕೆ.ವಿ.ಲೈನ್, 2ನೇ ಅಡ್ಡರಸ್ತೆ, ಕಾಟನ್‌ಪೇಟೆ, ರಾಧಾಕೃಷ್ಣ ಲಾಡ್ಜ್‌ ಸಮೀಪ. ಸಂಪರ್ಕ: 9141119651

ನಾಳೆ ನೀರಿನ ಅದಾಲತ್

ಜಲಮಂಡಳಿಯ ದಕ್ಷಿಣ-4 ಹಾಗೂ ವಾಯವ್ಯ-1ನೇ ಉಪವಿಭಾಗಗಳ ನೀರಿನ ಅದಾಲತ್ ಇದೇ 26 ರಂದು ಬೆಳಿಗ್ಗೆ 9.30ರಿಂದ 11ರವರೆಗೆ ನಡೆಯಲಿದೆ.

ದಕ್ಷಿಣ-4ನೇ ಉಪವಿಭಾಗದ ಸೇವಾ ಠಾಣೆಗಳಾದ ಎಚ್.ಎಸ್.ಆರ್. ಲೇಔಟ್ ಹಾಗೂ ಕೋಡಿಚಿಕ್ಕನಹಳ್ಳಿ ಸಂಬಂಧಿಸಿದ ವಿವಾದಗಳನ್ನು ಬಿ.ಟಿ.ಎಂ 2ನೇ ಹಂತದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯಲ್ಲಿ ಅಹವಾಲು ಹೇಳಿಕೊಳ್ಳಬಹುದು.‌ ದೂರವಾಣಿ ಸಂಖ್ಯೆಗಳು 080–22945143/22945392

ವಾಯವ್ಯ-1ನೇ ಉಪವಿಭಾಗದ ಸೇವಾ ಠಾಣೆಗಳಾದ ಕೇತಮಾರನಹಳ್ಳಿ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ 1, 2ನೇ ಹಂತ ಹಾಗೂ ನಂದಿನಿ ಲೇಔಟ್ 1ನೇ ಹಂತಕ್ಕೆ ಸಂಬಂಧಿಸಿದ ವಿವಾದಗಳನ್ನು ರಾಜಾಜಿನಗರ 1ನೇ ಹಂತದ ಕೇತಮಾರನಹಳ್ಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ದೂರವಾಣಿ ಸಂಖ್ಯೆಗಳು 080–23491123/22945176.

ಅರ್ಜಿ ಆಹ್ವಾನ

ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕ ಹುದ್ದೆಗಳ (ಬ್ಯಾಕ್‍ಲಾಗ್) ಭರ್ತಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರತಿ ಅಭ್ಯರ್ಥಿಯು ದಾಖಲೆಯ ಜತೆಗೆ ಎಂಟು ಅರ್ಜಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಹುದ್ದೆಗಳ ವಿವರ, ವಿದ್ಯಾರ್ಹತೆ, ಇನ್ನಿತರೆ ಮಾಹಿತಿಗಳ ಬಗ್ಗೆ website www.bangaloreuniversity.ac.in ನಲ್ಲಿ ಪ್ರಕಟಿಸಲಾಗಿದೆ. ಏಪ್ರಿಲ್ 23ರ ಒಳಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ವಿದ್ಯುತ್‌ ವ್ಯತ್ಯಯ

ಬಿಟಿಎಂ ನಾಲ್ಕನೇ ಹಂತದ ವಿದ್ಯುತ್‌ ಉಪಕೇಂದ್ರದ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ಇದೇ 25ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ವ್ಯತ್ಯಯ: ಕೆಂಪಮ್ಮ ಲೇಔಟ್, ಹುಳಿಮಾವು, ಭಗವತಿ ಲೇಔಟ್, ಬೇಗೂರು ಕ್ಲಾಸಿಕ್ ಲೇಔಟ್, ಅಕ್ಷಯ ನಗರ, ಯಾಲೇನಹಳ್ಳಿ, ನ್ಯಾನಪ್ಪನಹಳ್ಳಿ, ವಿಶ್ವಪ್ರಿಯ ಲೇಔಟ್, ಕಾಳೇನ ಅಗ್ರಹಾರ, ಬೇಗೂರು, ಅರಕೆರೆ, ಸಾಮ್ರಾಟ್ ಲೇಔಟ್, ಬಿಟಿಎಸ್ ಲೇಔಟ್, ಬಿಟಿಎಂ 4ನೇ ಹಂತ, ದೇವರಚಿಕ್ಕನಹಳ್ಳಿ, ಸತ್ಯಸಾಯಿ ಲೇಔಟ್, ಕೋಡಿಚಿಕ್ಕನಹಳ್ಳಿ, ಬಿಳೇಕಹಳ್ಳಿ, ಅನುಗ್ರಹ ಲೇಔಟ್, ವಿಜಯಬ್ಯಾಂಕ್ ಲೇಔಟ್, ಕುಟ್ಟಿಯಪ್ಪ ಗಾರ್ಡನ್, ರಾಘವೇಂದ್ರ ಕಾಲೊನಿ,
ಎಸ್‌ಬಿಐ ಲೇಔಟ್, ರೋಟರಿ ನಗರ, ಗಾರ್ವೆಬಾವಿ ಪಾಳ್ಯ,
ಕೂಡ್ಲು, ಕೆಎಸ್ಆರ್‌ಪಿ 9ನೇ ಬೆಟಾಲಿಯನ್, ಮಾರುತಿ ಲೇಔಟ್, ಹೊಂಗಸಂದ್ರ, ಓಂ ಶಕ್ತಿ ಲೇಔಟ್, ಬೊಮ್ಮನಹಳ್ಳಿ ಹಾಗೂ
ಸುತ್ತಮುತ್ತಲಿನ ಪ್ರದೇಶಗಳು.

ಕೂಡ್ಲು ವಿದ್ಯುತ್ ಚಿತಾಗಾರ ಸ್ಥಗಿತ

ಬೊಮ್ಮನಹಳ್ಳಿ ವಲಯದ ಕೂಡ್ಲು ವಿದ್ಯುತ್ ಚಿತಾಗಾರದ ಕುಲುಮೆ ಕಟ್ಟಡದ ದುರಸ್ತಿ ಕಾರ್ಯ ನಡೆಸಬೇಕಿರುವುದರಿಂದ ಇದೇ 26ರಿಂದ 29ರವರೆಗೆ ಸ್ಥಗಿತಗೊಳ್ಳಲಿದೆ.

ಸಾರ್ವಜನಿಕರು ಶವಸಂಸ್ಕಾರ ಕಾರ್ಯಕ್ಕೆ ವಿಲ್ಸನ್‌ ಗಾರ್ಡನ್‌, ಬನಶಂಕರಿ ಹಾಗೂ ಪಣತ್ತೂರು ವಿದ್ಯುತ್‌ ಚಿತಾಗಾರಗಳನ್ನು
ಬಳಸಿಕೊಳ್ಳಬೇಕು ಎಂದು ಬೊಮ್ಮನಹಳ್ಳಿ ವಲಯದ ಕಾರ್ಯನಿರ್ವಾಹಕ ಎಂಜಿನಿಯರ್‌ (ವಿದ್ಯುತ್) ಪ್ರಕಟಣೆಯಲ್ಲಿ ಕೋರಿದ್ದಾರೆ.

ರಾಮನವಮಿ ಶೋಭಾಯಾತ್ರೆ

ಹೊಸಕೋಟೆ: ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಇದೇ 25 ರಂದು ಹೊಸಕೋಟೆಯಲ್ಲಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ.

ಶ್ರೀರಾಮನ ಮೂರ್ತಿಯೊಂದಿಗೆ ಸ್ವಾಮಿ ವಿವೇಕಾನಂದ ಶಾಲೆಯಿಂದ ಮಧ್ಯಾಹ್ನ 2ಕ್ಕೆ ಹೊರಟು ಪಟ್ಟಣದ ಮುಖ್ಯಬೀದಿಗಳಲ್ಲಿ ಸಂಚರಿಸಿ ಕೆಜಿಕೆಎಂಎಸ್ ಶಾಲೆ ಆವರಣಕ್ಕೆ ತಲುಪಲಿದೆ. ಸಂಜೆ 5.30ಕ್ಕೆ ಸಭೆ ನಡೆಸಲಾಗುವುದು. ದೊಡ್ಡಬಳ್ಳಾಪುರದ ದಿವ್ಯಜ್ಞಾನಾನಂದ ಸ್ವಾಮೀಜಿ, ಸಾಮಾಜಿಕ ಕಾರ್ಯಕರ್ತ ರಾಜೇಶ್ ಪದ್ಮಾರ್ ಭಾಗವಹಿಸಲಿದ್ದಾರೆ ಎಂದು ತಾಲ್ಲೂಕು ಹಿಂದೂ ಜಾಗರಣಾ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT