ಮಂಗಳಗ್ರಹದಲ್ಲಿ 2 ಸಾವಿರ ದಿನ ಪೂರೈಸಿದ ‘ಕ್ಯೂರಿಯಾಸಿಟಿ’

7

ಮಂಗಳಗ್ರಹದಲ್ಲಿ 2 ಸಾವಿರ ದಿನ ಪೂರೈಸಿದ ‘ಕ್ಯೂರಿಯಾಸಿಟಿ’

Published:
Updated:
ಮಂಗಳಗ್ರಹದಲ್ಲಿ 2 ಸಾವಿರ ದಿನ ಪೂರೈಸಿದ ‘ಕ್ಯೂರಿಯಾಸಿಟಿ’

ಕೇಪ್ ಕೆನವೆರಾಲ್‌ (ಅಮೆರಿಕ): ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’, ಮಂಗಳಗ್ರಹಕ್ಕೆ ಕಳುಹಿಸಿದ್ದ ‘ಕ್ಯೂರಿಯಾಸಿಟಿ’ ರೋವರ್‌, ಮಾರ್ಚ್‌ 23ರಂದು ಎರಡು ಸಾವಿರ ದಿನಗಳನ್ನು ಪೂರೈಸಿದೆ.

ಮಂಗಳ ಗ್ರಹದಲ್ಲಿ ಒಂದು ಸೌರದಿನವೆಂದರೆ 24 ಗಂಟೆ 39 ನಿಮಿಷ ಮತ್ತು 35 ಸೆಕಂಡ್‌ಗಳು. ಮಂಗಳ ಗ್ರಹದಲ್ಲಿನ 2,000 ದಿನಗಳು ಭೂಮಿಯ ಮೇಲಿನ 2,055 ದಿನಗಳಿಗೆ ಸಮವಾಗಿವೆ.

ಆರು ಚಕ್ರಗಳನ್ನು ಹೊಂದಿರುವ ಈ ರೋವರ್‌, 2012ರಿಂದ ಮಂಗಳ ಗ್ರಹದ ಮೇಲೆ ಅನ್ವೇಷಣೆ ನಡೆಸುತ್ತಿದೆ. ಇದುವರೆಗೆ ಮಂಗಳನ ಅಂಗಳದಲ್ಲಿ 18.7 ಕಿಲೋ ಮೀಟರ್‌ ಸಂಚರಿಸಿದೆ. 

ಮಂಗಳ ಗ್ರಹದಲ್ಲಿ ಕಲ್ಲು ಮತ್ತು ಮಣ್ಣು ಅಧಿಕವಾಗಿರುವ ಪ್ರದೇಶದಲ್ಲಿ ‘ಕ್ಯೂರಿಯಾಸಿಟಿ’ ರೋವರ್‌ ನೆಲ ಅಗೆಯಲಿದ್ದು, ನಂತರ ಅದು ಕಳುಹಿಸುವ ಮಣ್ಣಿನ ಮಾದರಿಗೆ ‘ನಾಸಾ’ ಸಂಶೋಧಕರು ಕಾಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry