ಜಾರ್ಖಂಡ್‌ಗೆ ಮತ್ತಿಗೋಡು ಶಿಬಿರದ ಆನೆ

7

ಜಾರ್ಖಂಡ್‌ಗೆ ಮತ್ತಿಗೋಡು ಶಿಬಿರದ ಆನೆ

Published:
Updated:
ಜಾರ್ಖಂಡ್‌ಗೆ ಮತ್ತಿಗೋಡು ಶಿಬಿರದ ಆನೆ

ಗೋಣಿಕೊಪ್ಪಲು: ಇಲ್ಲಿನ ಮತ್ತಿಗೋಡು ಸಾಕಾನೆ ಶಿಬಿರದಿಂದ ಕಾಲಭೈರವೇಶ್ವರ (24) ಹೆಸರಿನ ಆನೆಯನ್ನು ಜಾರ್ಖಂಡ್‌ಗೆ ಕಳುಹಿಸಲಾಯಿತು.

ಜಾರ್ಖಾಂಡ್‌ನ ಪಾಲಮೌ ಟೈಗರ್ ರಿಸರ್ವ್ ಮೆದಿನಿ ನಗರದ ಸಾಕಾನೆ ಶಿಬಿರಕ್ಕೆ ಅಲ್ಲಿನ ಸರ್ಕಾರದ ಮನವಿ ಆಧರಿಸಿ ಕಳುಹಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಹೇಳಿದರು.

2013ರಲ್ಲಿ ಹಾಸನ ಜಿಲ್ಲೆ ಆಲೂರು ಅರಣ್ಯ ವ್ಯಾಪ್ತಿಯಲ್ಲಿ ಈ ಆನೆಯನ್ನು ಸೆರೆ ಹಿಡಿದು ಮತ್ತಿಗೋಡು ಶಿಬಿರಕ್ಕೆ ತಂದು ಕ್ರಾಲ್‌ನಲ್ಲಿ ಹಾಕಿ ಪಳಗಿಸಲಾಗಿತ್ತು. ಜಾರ್ಖಂಡ್‌ನ ಶಿಬಿರದಲ್ಲಿ ಇತರೆ ಆನೆಗಳನ್ನು ಪಳಗಿಸಲು ಈ ಅನೆಯ ಸೇವೆಯನ್ನು ಪಡೆಯಲಾಗುತ್ತದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry