ಬಾಲಕಿ ಮೇಲೆ ಅತ್ಯಾಚಾರ; ಹೂವಿನ ವ್ಯಾಪಾರಿ ಬಂಧನ

7

ಬಾಲಕಿ ಮೇಲೆ ಅತ್ಯಾಚಾರ; ಹೂವಿನ ವ್ಯಾಪಾರಿ ಬಂಧನ

Published:
Updated:

ಬೆಂಗಳೂರು: ಹದಿನೈದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ಹೂವಿನ ವ್ಯಾಪಾರಿ ವೆಂಕಟೇಶ್‌ನನ್ನು (25) ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಚುಂಚಘಟ್ಟದ ನಿವಾಸಿಯಾದ ಆರೋಪಿ, ಅಲ್ಲಿಯೇ ಹೂವಿನ ಅಂಗಡಿ ಇಟ್ಟುಕೊಂಡಿದ್ದಾನೆ. ಮದುವೆ ಸಮಾರಂಭಗಳಲ್ಲಿ ಹೂವಿನ ಅಲಂಕಾರ

ವನ್ನೂ ಮಾಡುತ್ತಾನೆ. ಈತನ ಅಂಗಡಿ ಪಕ್ಕವೇ ಬಾಲಕಿಯ ಪೋಷಕರು ಸಹ ಇನ್ನೊಂದು ಅಂಗಡಿ ಇಟ್ಟುಕೊಂಡಿದ್ದಾರೆ.

ಆರೋಪಿಗೆ ಹಲವು ವರ್ಷಗಳಿಂದ ಬಾಲಕಿಯ ಪೋಷಕರ ಪರಿಚಯವಿತ್ತು. ಅದನ್ನೇ ದುರುಪಯೋಗಪಡಿಸಿಕೊಂಡ ಆತ, ಬಾಲಕಿಯನ್ನು ಮಾತನಾಡಿಸಿ ಸಲುಗೆ ಬೆಳೆಸಲು ಆರಂಭಿಸಿದ್ದ. 9ನೇ ತರಗತಿಯಲ್ಲಿ ಓದುತ್ತಿರುವ ಸಂತ್ರಸ್ತೆ, ಶಾಲೆಗೆ ಹೋಗಿ ಮನೆಗೆ ವಾಪಸ್‌ ಬರುವಾಗ ಆರೋಪಿಯು ಪದೇ ಪದೇ ಭೇಟಿಯಾಗುತ್ತಿದ್ದ.

ಕೆಲ ದಿನಗಳ ಹಿಂದೆ ಬಾಲಕಿಯು ನಡೆದುಕೊಂಡು ಮನೆಗೆ ಹೊರಟಿದ್ದಳು. ಡ್ರಾಪ್ ಕೊಡುವುದಾಗಿ ಹೇಳಿ ಬೈಕ್‌ ಮೇಲೆ ಆಕೆಯನ್ನು ಹತ್ತಿಸಿಕೊಂಡಿದ್ದ ವೆಂಕಟೇಶ್‌, ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿಯೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ತಿಳಿಸಿದರು.

ಆರೋಪಿ ಕೈಯಿಂದ ತಪ್ಪಿಸಿಕೊಂಡಿದ್ದ ಬಾಲಕಿ, ಪೋಷಕರಿಗೆ ವಿಷಯ ತಿಳಿಸಿದ್ದಳು. ನಂತರವೇ ಕೋಣನಕುಂಟೆ ಠಾಣೆಗೆ ಪೋಷಕರು ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry