ಫೇಸ್‌ಬುಕ್‌ನಲ್ಲಿ ಫೋಟೊ ಹಾಕಿದ್ದರಿಂದ ಮನನೊಂದು ಯುವತಿ, ಆಕೆಯ ತಂದೆ ಆತ್ಮಹತ್ಯೆ

7

ಫೇಸ್‌ಬುಕ್‌ನಲ್ಲಿ ಫೋಟೊ ಹಾಕಿದ್ದರಿಂದ ಮನನೊಂದು ಯುವತಿ, ಆಕೆಯ ತಂದೆ ಆತ್ಮಹತ್ಯೆ

Published:
Updated:
ಫೇಸ್‌ಬುಕ್‌ನಲ್ಲಿ ಫೋಟೊ ಹಾಕಿದ್ದರಿಂದ ಮನನೊಂದು ಯುವತಿ, ಆಕೆಯ ತಂದೆ ಆತ್ಮಹತ್ಯೆ

ರಾಯಚೂರು: ಪುಂಡ ಯುವಕರು ಫೇಸ್‌ಬುಕ್‌ಗೆ ಯುವತಿಯ ಫೋಟೋ ಹಾಕಿದ್ದರಿಂದ ಮನನೊಂದು ಯುವತಿ ಮತ್ತು ಆಕೆಯ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಸ್ಕಿ ತಾಲ್ಲೂಕಿನ ಗೌಡನಬಾವಿ ಗ್ರಾಮದಲ್ಲಿ ನಡೆದಿದೆ.

20 ವರ್ಷದ ಬಸಲಿಂಗಮ್ಮ ಹಾಗೂ ಆಕೆಯ ತಂದೆ 55 ವರ್ಷದ ರಾಮನಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಕೆಲ ಪುಂಡ ಯುವಕರು ಬಸಲಿಂಗಮ್ಮಳ ಫೋಟೊವನ್ನು ಫೇಸ್‌ಬುಕ್ಕಿಗೆ ಅಪ್‌ಲೋಡ್ ಮಾಡಿದ್ದರು. ಇದನ್ನ ಪ್ರಶ್ನೆ ಮಾಡಿದಕ್ಕೆ ಯುವತಿಯ ಕಡೆಯವರ ಮೇಲೆ ಪುಂಡ ಹುಡುಗರು ಹಲ್ಲೆ ಕೂಡ ಮಾಡಿದ್ದರು ಎಂದು ಸ್ಥಳೀಯರು ದೂರಿದ್ದಾರೆ. 

ಇದರಿಂದ ಮನನೊಂದು ತಂದೆ ನೇಣು ಹಾಕಿಕೊಂಡರೇ,  ಬಸಲಿಂಗಮ್ಮ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಳಗಾನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry