ಕ್ರಿಕೆಟ್ ಆಟವೂ ಟ್ಯಾಟೂ ಪ್ರೀತಿಯೂ

7

ಕ್ರಿಕೆಟ್ ಆಟವೂ ಟ್ಯಾಟೂ ಪ್ರೀತಿಯೂ

Published:
Updated:
ಕ್ರಿಕೆಟ್ ಆಟವೂ ಟ್ಯಾಟೂ ಪ್ರೀತಿಯೂ

ದೇಶದಲ್ಲಿ ಐಪಿಎಲ್ ಜ್ವರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 11ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಕ್ರಿಕೆಟ್‌ ಆಟಗಾರರು ಹಾಕಿಸಿಕೊಂಡಿರುವ ಟ್ಯಾಟೂಗಳು ಹೊಸ ಕ್ರೇಜ್ ಸೃಷ್ಟಿಸುತ್ತಿವೆ.

ಕ್ರೀಡಾಂಗಣದಲ್ಲಿ ಹೊಡಿಬಡಿ ಅಟದ ಮೂಲಕ ರಂಜಿಸುವ ಆಟಗಾರರು ವಿಭಿನ್ನ ಶೈಲಿಯ ಟ್ಯಾಟೂ ಹಾಕಿಸಿಕೊಂಡು ಮಿಂಚುತ್ತಿದ್ದಾರೆ. ಅವರು ಹಾಕಿಸಿಕೊಂಡಿರುವ ಟ್ಯಾಟೂಗಳು ಫೇಸ್‌ಬುಕ್, ಇನ್ಸ್‌ಟಾಗ್ರಾಂಗಳಲ್ಲಿ ವೈರಲ್ ಆಗಿವೆ.

ಆಟಗಾರರು ಹಾಕಿಸಿಕೊಂಡಿರುವ ಟ್ಯಾಟೂಗಳು ಅವರ ಸ್ವಭಾವವನ್ನು ಹೇಳುವಂತಿವೆ ಎಂಬುವುದು ವಿಶೇಷ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ವಿರಾಟ್ ಕೋಹ್ಲಿ ತಮ್ಮ ಎಡ ತೋಳಿನ ಮೇಲೆ ಸಮುರಾಯ್ ವಾರಿಯರ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದು ಅವರ ಆಕ್ರಮಣಕಾರಿ ಮನೋಭಾವ ಸೂಚಿಸುತ್ತದೆ. ಅಲ್ಲದೆ, ಅವರು ತಮ್ಮ ತಂದೆ, ತಾಯಿಯ ಹೆಸರು ಹಾಕಿಸಿಕೊಳ್ಳುವುದನ್ನು ಮರೆತಿಲ್ಲ. ಈಚೆಗೆ ಹಾಕಿಸಿಕೊಂಡಿರುವ ಟ್ಯಾಟೂ ‘ಗಾಡ್ಸ್ ಐ’ ಹೆಚ್ಚು ವೈರಲ್ ಆಗಿದೆ. ವಿರಾಟ್ ಕೋಹ್ಲಿ ಮೈಮೇಲೆ ಒಟ್ಟು ಒಂಭತ್ತು ಟ್ಯಾಟೂಗಳಿವೆ.

ಸ್ಟೈಲ್‌, ಫ್ಯಾಷನ್‌ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಅನುಕರಿಸುತ್ತೇನೆ ಎಂದು ಹೇಳುವ ಕರ್ನಾಟಕದ ಆಟಗಾರ ಕೆ.ಎಲ್.ರಾಹುಲ್ ಅವರು ಐದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅವರ ಪ್ರೀತಿಯ ನಾಯಿ ಸಿಂಬಾ ನೆನಪಿಗಾಗಿ ಬೆನ್ನಿನ ಮೇಲೆ ಟ್ಯಾಟೂ ಇದೆ. ಅಲ್ಲದೆ, ಎಡತೋಳಿನ ಮೇಲೆ ಮಾವೋರಿ ಶೈಲಿ ಟ್ಯಾಟೂ ಇದೆ. ಇದು ಸಕಾರಾತ್ಮಕ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ.

ಶಿಖರ್ ಧವನ್ ಸಹ ಟ್ಯಾಟೂ ಪ್ರಿಯ. ಅವರು ತಮ್ಮ ಮಡದಿ ಆಯೇಷಾ ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಕರ್ನಾಟಕದ ಕೆ.ಎಲ್‌.ರಾಹುಲ್‌ ಮೈಯಲ್ಲೂ ಟ್ಯಾಟೂ

ವೆಸ್ಟ್ ಇಂಡೀಸ್‌ನ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಅವರು ಅವರು ಎದೆಯ ಮೇಲೆ ಹಾಕಿಸಿಕೊಂಡಿರುವ ಸಿಂಹದ ಮುಖದ ಟ್ಯಾಟೂ ಗಮನಸೆಳೆದಿತ್ತು.

ವಿಶಿಷ್ಟ ಸ್ಟೈಲ್‌ನಿಂದಾಗಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಯುವ ಆಟಗಾರ ಹಾರ್ದಿಕ್ ಪಾಂಡ್ಯ ಅವರ ಎಡ ತೋಳಿನ ಮೇಲೆ ಹುಲಿ ಚಿತ್ರದ ಟ್ಯಾಟೂ ಇದೆ. ಇದು ಶಕ್ತಿ ಮತ್ತು ಧೈರ್ಯವನ್ನು ತೋರಿಸುತ್ತದೆ. ಅಲ್ಲದೆ, ಅವರು ಎಡಗೈ ಮೇಲೆ ‘ಬಿಲೀವ್’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ರವೀಂದ್ರ ಜಡೇಜಾ ಅವರನ್ನು ‘ಜಡ್ಡು’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಅವರು ತಮ್ಮ ಬಲಗೈ ಮೇಲೆ ಕುದುರೆ ಚಿತ್ರದ ಆಕಾರದಲ್ಲಿ ‘ಜಡ್ಡು’ ಎಂದು ಇಂಗ್ಲಿಷ್ ಅಕ್ಷರಗಳಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದು, ಇದು ಅವರಿಗೆ ಪ್ರಾಣಿಗಳ ಮೇಲೆ ಇರುವ ಪ್ರೀತಿಯನ್ನು ತೋರಿಸುತ್ತದೆ. ಅವರ ಬೆನ್ನಿನ ಮೇಲೆ ಡ್ರ್ಯಾಗನ್ ಟ್ಯಾಟೂ ಇದೆ. ವೇಗದ ಬೌಲರ್ ಉಮೇಸ್ ಯಾದವ್‌ ಅವರ ಎಡಗೈ ಮೇಲೆ ಬುದ್ಧನ ಚಿತ್ರವಿರುವ ಟ್ಯಾಟೂ ಇದೆ. ತಮ್ಮ ನೆಚ್ಚಿನ ಕ್ರಿಕೆಟಿಗರ ಹೆಸರುಗಳನ್ನು ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗಳಿಗೆ ಲೆಕ್ಕವೇ ಇಲ್ಲ ಅಲ್ಲವೇ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry