ಅಮೀರ್‌ ಕನಸಿನ ಸಾಕಾರಕ್ಕೆ ದಿನಗಣನೆ

7

ಅಮೀರ್‌ ಕನಸಿನ ಸಾಕಾರಕ್ಕೆ ದಿನಗಣನೆ

Published:
Updated:
ಅಮೀರ್‌ ಕನಸಿನ ಸಾಕಾರಕ್ಕೆ ದಿನಗಣನೆ

ತಮ್ಮ ಜೀವನದ ಅತಿ ದೊಡ್ಡ ಮಹತ್ವಾಕಾಂಕ್ಷೆಯ ಹಾಗೂ ₹1,000 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಬೇಕೆಂದಿರುವ ‘ಮಹಾಭಾರತ’ ಚಿತ್ರಕ್ಕೆ ಅಮೀರ್‌ಖಾನ್‌ಗೆ ನಿರ್ಮಾಪಕರು ಸಿಕ್ಕಿದ್ದಾರೆ. ಹೀಗಾಗಿ ಸದ್ಯದಲ್ಲೇ ಈ ಚಿತ್ರದ ಕೆಲಸಗಳು ಆರಂಭವಾಗಬಹುದು ಎಂದು ನಿರೀಕ್ಷೆ ಗರಿಗೆದರಿವೆ.

ಉದ್ಯಮಿ ಮುಕೇಶ್‌ ಅಂಬಾನಿ ಈ ಚಿತ್ರಕ್ಕೆ ಹಣ ಹೂಡಲಿದ್ದಾರೆ. ತಾವು ಆರಂಭಿಸಿರುವ ಹೊಸ ಕಂಪೆನಿ ಮೂಲಕ ಮುಕೇಶ್‌ ಈ ಸಿನಿಮಾಕ್ಕೆ ಹಣ ಹೂಡಲಿದ್ದು, ಕಂಪನಿಯ ಮೊದಲ ಯೋಜನೆ ಈ ಸಿನಿಮಾವೇ ಆಗಲಿದೆ. ಭವಿಷ್ಯದಲ್ಲಿ ಈ ಕಂಪೆನಿ ಮೂಲಕ ಮತ್ತಷ್ಟು ಚಿತ್ರಕ್ಕೆ ಮುಕೇಶ್‌ ಬಂಡವಾಳ ಹೂಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ಸಿನಿಮಾ ₹1,000 ಕೋಟಿ ವೆಚ್ಚದ್ದು ಎಂಬ ಗಾಳಿ ಮಾತು ಅನೇಕ ತಿಂಗಳುಗಳಿಂದ ಹರಿದಾಡುತ್ತಿದೆ. ಆದರೆ ಇದನ್ನು ಅಮೀರ್‌ ಆಗಲಿ ಅಥವಾ ಚಿತ್ರತಂಡದ ಯಾರೊಬ್ಬರೂ ಸ್ಪಷ್ಟಮಾಡಿಲ್ಲ. ಒಂದು ವೇಳೆ ಈ ಸುದ್ದಿ ನಿಜವಾದರೆ ಇಷ್ಟು ದೊಡ್ಡ ಮೊತ್ತದಲ್ಲಿ ಭಾರತೀಯ ಚಿತ್ರರಂಗದಲ್ಲಿ ತಯಾರಾಗುತ್ತಿರುವ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry