ಕೃತಿಯ ಗುಜರಾತಿ ಪ್ರೀತಿ

7

ಕೃತಿಯ ಗುಜರಾತಿ ಪ್ರೀತಿ

Published:
Updated:
ಕೃತಿಯ ಗುಜರಾತಿ ಪ್ರೀತಿ

ಬಾಲಿವುಡ್‌ ಅಂಗಳದಲ್ಲಿ ಸುದ್ದಿ ಮಾಡುತ್ತಿರುವ ಚೆಲುವೆ ಕೃತಿ ಕರಬಂಧ ತಮ್ಮ ಮುಂದಿನ ಸಿನಿಮಾಗಾಗಿ ಗುಜರಾತಿ ಭಾಷೆ ಕಲಿಯುತ್ತಿದ್ದಾರೆ. ‘ಯಮ್ಲಾ ಪಗ್ಲಾ ದಿವಾನಾ: ಫಿರ್‌ ಸೆ’ ಚಿತ್ರದಲ್ಲಿ ಗುಜರಾತಿ ಬೆಡಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಗುಜರಾತಿಯರಂತೆ ಮಾತನಾಡುವುದನ್ನು ಕಲಿಯಲೆಂದೇ ತರಬೇತುದಾರರನ್ನೂ ನಿಯೋಜಿಸಿಕೊಂಡಿದ್ದಾರಂತೆ.

‘ಭಾಷಾ ತರಬೇತುದಾರರಿಂದ ಗುಜರಾತಿ ಕಲಿಯುತ್ತಿದ್ದೇನೆ. ಇದು ತುಂಬಾ ಸವಾಲು ಎನಿಸುತ್ತಿದೆ. ಈ ಸಿನಿಮಾ ಬಗೆಗೆ ನನಗೆ ತುಂಬಾ ನಿರೀಕ್ಷೆಗಳಿವೆ. ಹೀಗಾಗಿ ಚಿತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ಕಷ್ಟಪಟ್ಟಾದರೂ ಈ ಭಾಷೆಯನ್ನು ಕಲಿಯುತ್ತೇನೆ. ಪಕ್ಕಾ ಗುಜರಾತಿ ಹುಡುಗಿ ಎನ್ನಬೇಕು ಹಾಗೆ ನಟಿಸುತ್ತೇನೆ’ ಎಂದೂ ಅವರು ಹೇಳಿಕೊಂಡಿದ್ದಾರೆ. ಧರ್ಮೇಂದ್ರ, ಸನ್ನಿ ದೇವಲ್‌ ಹಾಗೂ ಬಾಬಿ ದೇವಲ್‌ ಅಭಿನಯಿಸಲಿರುವ ಈ ಚಿತ್ರಕ್ಕೆ ನವನೀತ್‌ ಸಿಂಗ್‌ ನಿರ್ದೇಶನವಿರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry