ಪಿಂಚಣಿ ಏರಿಕೆ ಯಾವಾಗ?

7

ಪಿಂಚಣಿ ಏರಿಕೆ ಯಾವಾಗ?

Published:
Updated:

ಇಪಿಎಸ್-95 ಪಿಂಚಣಿದಾರರು ತಮ್ಮ ಪಿಂಚಣಿ ಮೊತ್ತ ಹೆಚ್ಚಿಸಬೇಕೆಂದು ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈ ಪಿಂಚಣಿದಾರರಿಗೆ ಭರವಸೆ ಹೊರತಾಗಿ ಈವರೆಗೆ ಏನೂ ಲಭ್ಯವಾಗಿಲ್ಲ. ಸಚಿವರಾಗುವುದಕ್ಕೂ ಮೊದಲು ಪ್ರಕಾಶ್‌ ಜಾವಡೇಕರ್‌ ಅವರು ಈ ಪಿಂಚಣಿದಾರರ ಪರವಾಗಿ ಮಾತನಾಡಿದ್ದರು. ಈಗ ಅವರದ್ದೇ ಸರ್ಕಾರ ಇದ್ದರೂ ಮೌನ ವಹಿಸಿದ್ದಾರೆ.

ಸಂಸತ್ತಿನಲ್ಲಿ ಗದ್ದಲ, ಪ್ರತಿರೋಧಗಳಿಲ್ಲದೆಯೇ ಸಂಸದರು ತಮ್ಮ ವೇತನವನ್ನು ಹೆಚ್ಚಿಸಿಕೊಂಡರು. ಕೇಂದ್ರ ಸರ್ಕಾರದ ನೌಕರರ ವೇತನವನ್ನೂ ಏರಿಸಿದ್ದಾಯಿತು. ಇಪಿಎಸ್-95 ಪಿಂಚಣಿದಾರರು ಬೆವರು ಸುರಿಸಿ ದುಡಿದ ಹಣದಲ್ಲಿ ಒಂದು ಭಾಗವನ್ನು ಪಿಂಚಣಿ ಯೋಜನೆಗಾಗಿ ಕೊಟ್ಟಿದ್ದರೂ ಪಿಂಚಣಿ ಮಾತ್ರ ಏರಿಕೆ ಆಗಿಲ್ಲ. ಈ ತಾತ್ಸಾರ ಏಕೆ? ಜನಪ್ರತಿನಿಧಿಗಳು ಇತ್ತ ಗಮನ ಹರಿಸುವರೇ?

ಪತ್ರೇಶ ಮಜ್ಜಗಿ, ಮುಗುಟಖಾನ ಹುಬ್ಬಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry