ಆಧಾರ್‌: ಗಡುವು ವಿಸ್ತರಣೆ

7

ಆಧಾರ್‌: ಗಡುವು ವಿಸ್ತರಣೆ

Published:
Updated:
ಆಧಾರ್‌: ಗಡುವು ವಿಸ್ತರಣೆ

ನವದೆಹಲಿ: ವಿಮಾ ಪಾಲಿಸಿಗಳಿಗೆ ಆಧಾರ್‌ ಸಂಖ್ಯೆ ಜೋಡಣೆ ಗಡುವನ್ನು ವಿಸ್ತರಿಸಲಾಗಿದೆ. ಆಧಾರ್‌ ಯೋಜನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ

ಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಪೂರ್ಣಗೊಳಿಸುವವರೆಗೆ ಗಡುವನ್ನು ವಿಸ್ತರಿಸಲಾಗಿದೆ ಎಂದು ವಿಮಾ ನಿಯಂತ್ರಣ ಸಂಸ್ಥೆ ಐಆರ್‌ಡಿಎಐ ತಿಳಿಸಿದೆ.

ಬ್ಯಾಂಕ್‌ ಖಾತೆಗಳು ಮತ್ತು ಮೊಬೈಲ್‌ ದೂರವಾಣಿಗೆ ಆಧಾರ್‌ ಜೋಡಣೆಯ ಗಡುವನ್ನು ವಿಚಾರಣೆ ಪೂರ್ಣಗೊಳ್ಳುವವರೆಗೆ ವಿಸ್ತರಿಸಿ ಇದೇ 13ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

ಈಗಾಗಲೇ ಇರುವ ವಿಮಾ ಪಾಲಿಸಿಗಳಿಗೆ ಆಧಾರ್‌ ಜೋಡಣೆ ಗಡುವು ವಿಸ್ತರಣೆಯಾಗಿದೆ. ಹೊಸ ಪಾಲಿಸಿ ಮಾಡಿಸುವವರಿಗೆ ಪಾಲಿಸಿ ಮಾಡಿಸಿದ ದಿನಾಂಕದಿಂದ ಆರು ತಿಂಗಳವರೆಗೆ ಆಧಾರ್‌ ಜೋಡಣೆಗೆ ಅವಕಾಶ ಕಲ್ಪಿಸಲಾಗಿದೆ. ಆಧಾರ್‌ ಇಲ್ಲದವರು ಹಣ ಅಕ್ರಮ ವರ್ಗಾವಣೆ ತಡೆ (ದಾಖಲಾತಿ ನಿರ್ವಹಣೆ) ನಿಯಮಗಳು 2005ರಲ್ಲಿ ಉಲ್ಲೇಖಿಸಲಾಗಿರುವ ಯಾವುದಾದರೂ ದಾಖಲೆಗಳನ್ನು ನೀಡಬಹುದು ಎಂದು ಐಆರ್‌ಡಿಎಐ ತಿಳಿಸಿದೆ.

ಅನಿವಾಸಿ ಭಾರತೀಯರು, ಭಾರತ ಸಂಜಾತ ವ್ಯಕ್ತಿಗಳಲ್ಲಿ ಆಧಾರ್‌ ಇಲ್ಲದಿದ್ದರೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯು ಮಾನ್ಯತೆ ನೀಡಿರುವ ಯಾವುದೇ ದಾಖಲೆಗಳನ್ನು ಸಲ್ಲಿಸಬಹುದು ಎಂದು ಐಆರ್‌ಡಿಎಐ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry