ಮಧ್ಯ ಪ್ರದೇಶ: 2.5 ಲಕ್ಷ ಜಾನುವಾರುಗಳಿಗೆ ಆಧಾರ್ ಸಂಖ್ಯೆ!

6

ಮಧ್ಯ ಪ್ರದೇಶ: 2.5 ಲಕ್ಷ ಜಾನುವಾರುಗಳಿಗೆ ಆಧಾರ್ ಸಂಖ್ಯೆ!

Published:
Updated:

ಇಂದೋರ್‌: ಮಧ್ಯ ಪ್ರದೇಶದಲ್ಲಿ 90 ಲಕ್ಷ ಜಾನುವಾರಗಳ ಪೈಕಿ 2.50 ಲಕ್ಷ ಜಾನುವಾರುಗಳಿಗೆ 12 ಅಂಕಿಗಳ ಆಧಾರ್‌ ಸಂಖ್ಯೆಯಂತೆ ವಿಶಿಷ್ಟ ಗುರುತಿನ ಸಂಖ್ಯೆಯ ಮುದ್ರೆ (ಯುಐಡಿ) ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾನುವಾರುಗಳ ಸುರಕ್ಷತೆ ಹಾಗೂ ಹಾಲು ಉತ್ಪಾದನೆ ಹೆಚ್ಚಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಹಸುಗಳು ಹಾಗೂ ಎಮ್ಮೆಗಳ ಕಿವಿಯಲ್ಲಿ ಯುಐಡಿ ಸಂಖ್ಯೆಯ ಮುದ್ರೆ ಹಾಕಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಮೊದಲ ಹಂತದಲ್ಲಿ 40 ಲಕ್ಷ ಜಾನುವಾರುಗಳಿಗೆ ಯುಐಡಿ ಸಂಖ್ಯೆಯ ಮುದ್ರೆ ಹಾಕಲು ಕ್ರಮ ತೆಗೆದುಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಉಳಿದ ಎಲ್ಲ ಜಾನುವಾರುಗಳಿಗೆ ಯುಐಡಿ ಸಂಖ್ಯೆಯ ಮುದ್ರೆ ಹಾಕಲಾಗುವುದು’ ಎಂದು ಪಶುವೈದ್ಯಕೀಯ ಇಲಾಖೆಯ ಜಂಟಿ ನಿರ್ದೇಶಕ ಗುಲಾಬ್‌ಸಿಂಗ್‌ ದಾವರ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry