ರಾಜ್ಯದ ಯುವ ಆಟಗಾರರಿಗೆ ಆಸ್ಟ್ರೇಲಿಯಾ ಪ್ರತಿಭೆಗಳ ‘ಪಾಠ’

7

ರಾಜ್ಯದ ಯುವ ಆಟಗಾರರಿಗೆ ಆಸ್ಟ್ರೇಲಿಯಾ ಪ್ರತಿಭೆಗಳ ‘ಪಾಠ’

Published:
Updated:
ರಾಜ್ಯದ ಯುವ ಆಟಗಾರರಿಗೆ ಆಸ್ಟ್ರೇಲಿಯಾ ಪ್ರತಿಭೆಗಳ ‘ಪಾಠ’

ಬೆಂಗಳೂರು: ರಾಜ್ಯದ ಯುವ ಕ್ರಿಕೆಟ್ ಪ್ರತಿಭೆಗಳಿಗೆ ಸಾಣೆ ಹಿಡಿಯಲು ಆಸ್ಟ್ರೇಲಿಯಾದ ಹಿರಿಯ ಆಟಗಾರರು ನಗರಕ್ಕೆ ಬರಲಿದ್ದಾರೆ.

ಮೇ 14ರಿಂದ ಕಾಸ್ಮಿಕ್ ಕ್ರಿಕೆಟ್‌ ಅಕಾಡೆಮಿ ಆಯೋಜಿಸಲಿರುವ ವಿಶೇಷ ತರಬೇತಿ ಶಿಬಿರದಲ್ಲಿ ಮೂವರು ಕೋಚ್‌ಗಳು, ಒಬ್ಬರು ಟ್ರೇನರ್ ಮತ್ತು ಒಬ್ಬರು ಮನೋದೈಹಿಕ ಫಿಟ್‌ನೆಸ್ ತರಬೇತುದಾರರು ಪಾಲ್ಗೊಳ್ಳಲಿದ್ದಾರೆ.

ಕಿಣಿ ಸ್ಪೋರ್ಟ್ಸ್ ಅರೆನಾ ಆವರಣದಲ್ಲಿ ಕಾಸ್ಮಿಕ್ ಡರೆನ್‌ ಲೆಹ್ಮನ್ ಕ್ರಿಕೆಟ್ ಅಕಾಡೆಮಿಯ ಹೈ ಪರ್ಫಾರ್ಮೆನ್ಸ್‌ ಯೋಜನೆಯಡಿ ಶಿಬಿರ ಆಯೋಜಿಸಲಾಗಿದೆ.

ಡರೆನ್ ಲೆಹ್ಮನ್ ಕ್ರಿಕೆಟ್‌ ಅಕಾಡೆಮಿಯ ಮುಖ್ಯ ಕೋಚ್‌ ಶಾನ್ ಸೀಗರ್ಟ್‌, ಹಿರಿಯ ಕೋಚ್‌ಗಳಾದ ಪೀಟರ್ ಮೆಗ್ಲಟನ್‌, ಆ್ಯಂಡ್ರ್ಯೂ ಸಿಜರ್ಸ್‌, ಟ್ರೇನರ್ ಸೀನ್‌ ಬಾಕರ್ ಮತ್ತು ಮನೋದೈಹಿಕ ತರಬೇತುಗಾರ್ತಿ ಜೈಮಿ ಎ ಕೋರ್ಟ್‌ ಅವರು 45 ದಿನ ಇಲ್ಲಿದ್ದು ಕ್ರಿಕೆಟ್ ತಂತ್ರ ಹಾಗೂ ಫಿಟ್‌ನೆಸ್‌ ಮಂತ್ರವನ್ನು ಹೇಳಿಕೊಡುವರು.

ಯೋಜನೆಯ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕಾಸ್ಮಿಕ್ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕ ಆರ್‌.ಕುಮಾರ್‌ ‘ಆಸ್ಟ್ರೇಲಿಯಾದಲ್ಲಿ ನೀಡುವ ತರಬೇತಿಯ ಗುಣಮಟ್ಟ ಉತ್ತಮವಾಗಿದೆ. ಅಲ್ಲಿಗೆ ತೆರಳಿ ತಿಂಗಳುಗಟ್ಟಲೆ ಇದ್ದು ಕ್ರಿಕೆಟ್ ಕಲಿಯಬೇಕಾದರೆ ಲಕ್ಷಗಟ್ಟಲೆ ಹಣ ಬೇಕು. ಇಲ್ಲಿಯ ಕ್ರಿಕೆಟಿಗರಿಗೆ ಗುಣಮಟ್ಟದ ತರಬೇತಿ ಕೊಡಿಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ’ ಎಂದರು.

ಮಾಹಿತಿಗೆ 8971844333 ಅಥವಾ 9844211666 ಸಂಪರ್ಕಿಸಬಹುದು. www.cosmicdlca.com ವೆಬ್‌ಸೈಟ್ ಕೂಡ ಸಂದರ್ಶಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry